ಪಾಟ್ನಾ: ಸಮಾಜದಲ್ಲಿ ತೃತೀಯ ಲಿಂಗಿಗಳ ಭಾಗವಹಿಸುವಿಕೆಯನ್ನು ಹೆಚ್ಚಿಸಲು ನೋಯ್ಡಾ ಮೆಟ್ರೋ ರೈಲು ನಿಗಮ (ಎನ್‌ಎಂಆರ್‌ಸಿ) ದೊಡ್ಡ ಹೆಜ್ಜೆ ಇಟ್ಟಿದೆ. ಪಿಂಕ್ ಸ್ಟೇಷನ್ ನಂತರ, ಎನ್‌ಎಂಆರ್‌ಸಿ (NMRC) ಟ್ರಾನ್ಸ್ಜೆಂಡರ್ ಸ್ಟೇಷನ್ ಪ್ರಾರಂಭವಾಯಿತು. ಇದರ ಅಡಿ, ನೋಯ್ಡಾ ಸೆಕ್ಟರ್ 50 ಮೆಟ್ರೋ ನಿಲ್ದಾಣವನ್ನು ತೃತೀಯ ಲಿಂಗಿಗಳಿಗಾಗಿ ಸಮರ್ಪಿಸಿತು. ಈಗ ತೃತೀಯ ಲಿಂಗಿಯಾದ ಕತಿಹಾರ್‌ನ ಮಹಿ ಗುಪ್ತಾ ಈ ನೋಯ್ಡಾ ವಲಯದಲ್ಲಿನ 50 ನಿಲ್ದಾಣಗಳ ತಂಡದ ನಾಯಕಿಯಾಗಿ ಸಾಧನೆ ತೋರಿದ್ದಾರೆ.
ಬಿಹಾರದ ಕತಿಹಾರ್ ಜಿಲ್ಲೆಯ ಕರ್ಹಗೋಳ ಬ್ಲಾಕ್ ವ್ಯಾಪ್ತಿಯ ಸೇಮಾಪುರ ಗ್ರಾಮಕ್ಕೆ ಸೇರಿದ ಮಹಿ, ತೃತೀಯ ಲಿಂಗಿ ಎಂದು ಮನೆಯವರು ಗ್ರಾಮಸ್ಥರು ಹೊರಹಾಕಿದ್ದರು. ಆದರೆ, ಧೃತಿಗೆಡೆದ ಮಹಿ ಏನಾದರೂ ಸಾಧಿಸಬೇಕು ಎಂಬ ಛಲದಿಂದ ಮಕ್ಕಳಿಗೆ ಟ್ಯೂಷನ್ ನೀಡುವುದರ ಜೊತೆಗೆ ತನ್ನ ಶಿಕ್ಷಣವನ್ನು ಪ್ರಾರಂಭಿಸುತ್ತಾರೆ.
ಪದವಿಯು ಪಡೆಯುತ್ತಾರೆ, 2013 ರಲ್ಲಿ ಮಹಿ ಲಿಂಗವನ್ನು ಗಂಡಿನಿಂದ ಹೆಣ್ಣಿಗೆ ಬದಲಾಯಿಸಿಕೊಳ್ಳುತ್ತಾರೆ. ಬಿಹಾರ ಟ್ರಾನ್ಸ್‌ಜೆಂಡರ್ ಕಲ್ಯಾಣ ಮಂಡಳಿಯ ಸದಸ್ಯರೂ ಆಗಿ ಕಾರ್ಯ ನಿರ್ವಹಿಸುತ್ತಾರೆ. ಇದಾಗಿ 2019 ರಲ್ಲಿ ದೆಹಲಿಯಲ್ಲಿ ತೃತೀಯ ಲಿಂಗಿಗಳಿಗೆ ಉದ್ಯೋಗಗಳು ಹೊರ ಬರುತ್ತಿವೆ ಎಂಬ ಮಾಹಿತಿಯನ್ನು ಪಡೆದ ನಂತರ ಅದಕ್ಕಾಗಿ ಪೂರ್ವ ಸಿದ್ದತೆಗಳನ್ನು ಮಾಡಿಕೊಂಡರು.
ಬರೀ ಕಷ್ಟದ ಹಾದಿಯಲ್ಲೆ ಸಾಗಿ ಬಂದ ಮಹಿ ಈಗ ನಾನು ಉತ್ತಮ ಮಟ್ಟದಲ್ಲಿದ್ದೇನೆ. ಆದರೆ, ಇಲ್ಲಿಗೆ ನನ್ನ ಪಯಣ ನಿಲ್ಲುವುದಿಲ್ಲ ಇನ್ನು ಉತ್ತಮ ಮಟ್ಟಕ್ಕೆ ಹೋಗಲು ಬಯುಸುತ್ತೇನೆ. ನನ್ನಂತ ಸಹೋದರ ಸಹೋದರಿಯರಿಗೆ ನಾನು ಖಂಡಿತವಾಗಿಯು ಸಹಾಯ ಮಾಡುತ್ತೇನೆ. ಯಾರು ನನ್ನನ್ನು ನನ್ನ ಲಿಂಗದ ಕಾರಣಕ್ಕೆ ಮನೆಯಿಂದ ಊರಿನಿಂದ ಹೊರಹಾಕಿದರೊ ಅವರೇ ಇಂದು ನನ್ನನ್ನು ಸಂಪರ್ಕಿಸಿ ನನ್ನ ಕೆಲಸವನ್ನು ಸಾಧನೆಯನ್ನು ಕೊಂಡಾಡುತ್ತಿದ್ದಾರೆ ಎಂದು ಮಾಧ್ಯಮದೊಂದಿಗೆ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಶಸ್ತ್ರಾಸ್ತ್ರ ನಾಪತ್ತೆ ಪ್ರಕರಣ: 25 ವರ್ಷಗಳ ಬಳಿಕ ಆರೋಪಿಗಳ ವಿರುದ್ಧ ಪ್ರಕರಣ ದಾಖಲು