ಕರ್ನಾಟಕ

karnataka

ETV Bharat / bharat

ಅತಿ ದೊಡ್ಡ ಸೈಬರ್ ಕಳ್ಳತನ: ಬ್ಯಾಂಕ್​​ಗೆ ಸರ್ವರ್​ ಹ್ಯಾಕ್​ ಮಾಡಿ 12 ಕೋಟಿ ಲೂಟಿ - ಬ್ಯಾಂಕ್​​ಗೆ ಸರ್ವರ್​ ಹ್ಯಾಕ್​ ಮಾಡಿ 12 ಕೋಟಿ ಲೂಟಿ

ಸೈಬರ್‌ ಕಳ್ಳರು ಬ್ಯಾಂಕ್‌ನ ಸರ್ವರ್‌ಗಳನ್ನು ಹ್ಯಾಕ್ ಮಾಡಿದ ನಂತರ ಸುಮಾರು ನೂರಕ್ಕೂ ಹೆಚ್ಚು ಮುಖ್ಯ ಖಾತೆಗಳಿಗೆ ಲಾಗ್ ಇನ್ ಆಗಿರುವುದು ಮಾತ್ರವಲ್ಲದೇ, ಆ ಖಾತೆಗಳಿಂದ 12 ಕೋಟಿಗೂ ಹೆಚ್ಚು ರೂಪಾಯಿಯನ್ನ ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ.

Mahesh Cooperative Bank servers hacked in Hyderabad, Rs 12 crore siphoned off
ಹೈದರಾಬಾದ್​​ನಲ್ಲೇ ಅತಿ ದೊಡ್ಡ ಸೈಬರ್ ಕಳ್ಳತನ: ಬ್ಯಾಂಕ್​​ಗೆ ಸರ್ವರ್​ ಹ್ಯಾಕ್​ ಮಾಡಿ 12 ಕೋಟಿ ಲೂಟಿ

By

Published : Jan 25, 2022, 11:13 AM IST

ಹೈದರಾಬಾದ್(ತೆಲಂಗಾಣ):ಸಹಕಾರಿ ಬ್ಯಾಂಕೊಂದರ ಸರ್ವರ್​ಗಳನ್ನು ಹ್ಯಾಕ್ ಮಾಡಿದ ಸೈಬರ್ ಕಳ್ಳರು 12 ಕೋಟಿ ರೂಪಾಯಿ ಲೂಟಿ ಮಾಡಿದ ಘಟನೆ ತೆಲಂಗಾಣದ ಹೈದರಾಬಾದ್​​ನಲ್ಲಿ ನಡೆದಿದ್ದು, ಇದು ಹೈದರಾಬಾದ್​ ನಗರದಲ್ಲೇ ನಡೆದ ಅತಿ ದೊಡ್ಡ ಸೈಬರ್ ವಂಚನೆ ಪ್ರಕರಣವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹೌದು, ಹೈದರಾಬಾದ್ ನಗರದಲ್ಲಿರುವ ಆಂಧ್ರಪ್ರದೇಶ ಮಹೇಶ್ ಕೋ ಆಪರೇಟಿವ್ ಬ್ಯಾಂಕ್​ನ ಸರ್ವರ್​ಗಳನ್ನು ಹ್ಯಾಕ್ ಮಾಡಿ, ಸುಮಾರು 12 ಕೋಟಿ ರೂಪಾಯಿ ಲೂಟಿ ಮಾಡಲಾಗಿದೆ. ಬ್ಯಾಂಕ್​​ನ ಅಧಿಕಾರಿಯೊಬ್ಬರ ದೂರು ಆಧರಿಸಿ, ಸೈಬರ್ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಪೊಲೀಸರ ಪ್ರಕಾರ, ಸೈಬರ್‌ ಕಳ್ಳರು ಬ್ಯಾಂಕ್‌ನ ಸರ್ವರ್‌ಗಳನ್ನು ಹ್ಯಾಕ್ ಮಾಡಿದ ನಂತರ ಸುಮಾರು ನೂರಕ್ಕೂ ಹೆಚ್ಚು ಮುಖ್ಯ ಖಾತೆಗಳಿಗೆ ಲಾಗ್ ಇನ್ ಆಗಿರುವುದು ಮಾತ್ರವಲ್ಲದೇ, ಆ ಖಾತೆಗಳಿಂದ 12 ಕೋಟಿಗೂ ಹೆಚ್ಚು ರೂಪಾಯಿಯನ್ನ ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ.

ಬ್ಯಾಂಕ್ ಖಾತೆಗಳ ಆಂತರಿಕ ಪರಿಶೀಲನೆ ವೇಳೆ ವಂಚನೆ ಬೆಳಕಿಗೆ ಬಂದಿದೆ. ಕೂಡಲೇ ಬ್ಯಾಂಕ್ ಅಧಿಕಾರಿಗಳು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಯಾರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಿದೆ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆಂಧ್ರಪ್ರದೇಶ ಮಹೇಶ್ ಸಹಕಾರಿ ಬ್ಯಾಂಕ್ ನಾಲ್ಕು ರಾಜ್ಯಗಳಲ್ಲಿ ಒಟ್ಟು 45 ಶಾಖೆಗಳನ್ನು ಹೊಂದಿದೆ ಮತ್ತು ಹೈದರಾಬಾದ್‌ನಲ್ಲಿ ಬ್ಯಾಂಕ್​ನ ಕೇಂದ್ರ ಕಚೇರಿ ಇದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

ABOUT THE AUTHOR

...view details