ಕರ್ನಾಟಕ

karnataka

ETV Bharat / bharat

ಪಂಜಾಬ್​ನ ಬಟಿಂಡಾದಲ್ಲಿ ಕಿಡಿಗೇಡಿಗಳಿಂದ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ - Mahatma Gandhi statue broken by mischievous

ಪಂಜಾಬ್​ನ ಬಟಿಂಡಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ- ಕಿಡಿಗೇಡಿಗಳಿಂದ ರಾಷ್ಟ್ರಪಿತನ ಮೂರ್ತಿಗೆ ಅವಮಾನ- ಪ್ರಕರಣ ದಾಖಲಿಸಿಕೊಂಡ ಪೊಲೀಸರಿಂದ ವಿಕೃತಿಗಳ ಪತ್ತೆ ಕಾರ್ಯ ಶುರು.

ಪಂಜಾಬ್​ನ ಬಟಿಂಡಾದಲ್ಲಿ ಕಿಡಿಗೇಡಿಗಳಿಂದ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ
ಪಂಜಾಬ್​ನ ಬಟಿಂಡಾದಲ್ಲಿ ಕಿಡಿಗೇಡಿಗಳಿಂದ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ

By

Published : Jul 16, 2022, 12:58 PM IST

Updated : Jul 16, 2022, 1:28 PM IST

ಬಟಿಂಡಾ(ಪಂಜಾಬ್​):ಪಂಜಾಬ್​ನ ಬಟಿಂಡಾ ಜಿಲ್ಲೆಯ ತಲವಂಡಿ ಸಾಬೋ ಉಪವಿಭಾಗದ ರಾಮಮಂಡಿಯಲ್ಲಿ ಕೆಲ ಕಿಡಿಗೇಡಿಗಳು ಮಹಾತ್ಮ ಗಾಂಧಿಯ ಪ್ರತಿಮೆಯನ್ನು ಧ್ವಂಸ ಮಾಡಿ ವಿಕೃತಿ ಮೆರೆದಿದ್ದಾರೆ. ಘಟನೆ ಬಳಿಕ ಅಲ್ಲಿನ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಮೆ ಧ್ವಂಸ ಮಾಡಿದ ಕಾರಣದ ಬಗ್ಗೆ ತಿಳಿದು ಬಂದಿಲ್ಲ.

ರಾಮಮಂಡಿಯ ಸಾರ್ವಜನಿಕ ಉದ್ಯಾನವನದಲ್ಲಿದ್ದ ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿತ್ತು. ಆದರೆ, ಯಾರೋ ಕಿಡಿಗೇಡಿಗಳು ಮೂರ್ತಿಯನ್ನು ಬುಡಸಮೇತ ಹೊಡೆದು ಹಾಕಿದ್ದಾರೆ. ವಿಷಯ ಬೆಳಕಿಗೆ ಬಂದ ಬಳಿಕ ಅಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸಿ, ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಬಗ್ಗೆ ರಾಮಮಂಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲ ದಿನಗಳ ಹಿಂದಷ್ಟೇ ಕೆನಡಾದ ಟೊರೊಂಟೋದಲ್ಲಿ ರಾಷ್ಟ್ರಪಿತನ ಮೂರ್ತಿಯನ್ನು ಧ್ವಂಸ ಮಾಡಿದ ಘಟನೆ ನಡೆದಿತ್ತು.

ಓದಿ:ಬಂಗಾರದ ದರ ಇಳಿಕೆ : ರಾಷ್ಟ್ರ, ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ

Last Updated : Jul 16, 2022, 1:28 PM IST

ABOUT THE AUTHOR

...view details