ವಾಷಿಂಗ್ಟನ್:ಅಮೆರಿಕದ ಕ್ಯಾಲಿಫೋರ್ನಿಯಾದ ಉದ್ಯಾನವನದಲ್ಲಿರುವ ಮಹಾತ್ಮ ಗಾಂಧೀಜಿ ಪ್ರತಿಮೆಯನ್ನು ದುಷ್ಕರ್ಮಿಗಳು ವಿರೂಪಗೊಳಿಸಿದ್ದು, ಭಾರತ ಇದನ್ನು ತೀವ್ರವಾಗಿ ಖಂಡಿಸಿದೆ.
ಉತ್ತರ ಕ್ಯಾಲಿಫೋರ್ನಿಯಾದ ಡೇವಿಸ್ ನಗರದ ಸೆಂಟ್ರಲ್ ಪಾರ್ಕ್‌ನಲ್ಲಿ 6 ಅಡಿ ಎತ್ತರ, 650-ಪೌಂಡ್ (294 ಕೆಜಿ) ತೂಕದ ಕಂಚಿನ ಪ್ರತಿಮೆಯ ಪಾದ ಹಾಗೂ ಮುಖ ಭಾಗವನ್ನು ವಿರೂಪಗೊಳಿಸಲಾಗಿದೆ. ಇದರ ವಿರುದ್ಧ ಅಮೆರಿಕದಲ್ಲಿರುವ ಭಾರತೀಯರು ಆಕ್ರೋಶ ಹೊರಹಾಕಿದ್ದು, ಈ ಸಂಬಂಧ ತನಿಖೆ ನಡೆಸಬೇಕೆಂದು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಇಂದು ಘಟನೆ ಬೆಳಕಿಗೆ ಬಂದಿದ್ದು, ಜನವರಿ 28ರಂದು ಘಟನೆ ನಡೆದಿದೆ ಎಂದು ಹೇಳಲಾಗಿದೆ. ಪ್ರತಿಮೆಯನ್ನು ನಿಖರವಾಗಿ ಯಾವಾಗ ಹಾಗೂ ಯಾಕೆ ವಿರೂಪಗೊಳಿಸಲಾಯಿತು ಎಂಬುದನ್ನು ಪೊಲೀಸರು ಪತ್ತೆ ಹೆಚ್ಚುತ್ತಿದ್ದಾರೆ.