ಕರ್ನಾಟಕ

karnataka

ETV Bharat / bharat

ಮಹಾತ್ಮ ಗಾಂಧಿ ಪುಣ್ಯಸ್ಮರಣೆ: ಪ್ರಧಾನಿ ಮೋದಿ ಸೇರಿದಂತೆ ಗಣ್ಯರಿಂದ ಗೌರವ ನಮನ - ನಾಥುರಾಮ್​ ಗೋಡ್ಸೆ ಗುಂಡೇಟಿ

ಮಹಾತ್ಮ ಗಾಂಧೀಜಿ ಅವರ ಪುಣ್ಯ ಸ್ಮರಣೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಗೌರವ ನಮನ ಸಲ್ಲಿಸಿ ಟ್ವೀಟ್​ ಮಾಡಿದ್ದಾರೆ.

ಮಹಾತ್ಮ ಗಾಂಧಿ ಪುಣ್ಯಸ್ಮರಣೆ; ಪ್ರಧಾನಿ ಮೋದಿ ಸೇರಿದಂತೆ ಗಣ್ಯರಿಂದ ಗೌರವ ನಮನ
mahatma-gandhi-death-anniversary-final-bow-from-dignitaries-including-prime-minister-modi

By

Published : Jan 30, 2023, 10:55 AM IST

Updated : Jan 30, 2023, 12:37 PM IST

ಬೆಂಗಳೂರು: ಇಂದು ಮಹಾತ್ಮ ಗಾಂಧೀಜಿ ಅವರ 75ನೇ ಪುಣ್ಯ ಸ್ಮರಣೆ. ಭಾರತದ ಸ್ವಾತಂತ್ರ್ಯಕ್ಕಾಗಿ ಅಹಿಂಸಾ ಮಾರ್ಗದ ಮೂಲಕ ಹೋರಾಡಿದ ಬಾಪು 1948 ಜನವರಿ 30ರಂದು ನಾಥುರಾಮ್​ ಗೋಡ್ಸೆ ಗುಂಡೇಟಿನಿಂದ ನಿಧನರಾಗಿದ್ದರು. ಸತ್ಯ​ ಮತ್ತು ಅಹಿಂಸೆಯಲ್ಲಿ ಅಪಾರ ನಂಬಿಕೆ ಹೊಂದಿದ್ದ ಗಾಂಧಿ ಆಲೋಚನೆಗಳು ಜಗತ್ತಿನಾದ್ಯಾಂತ ಪ್ರಶಂಸೆಗೆ ಒಳಗಾಗಿವೆ. ಈ ದಿನವನ್ನು ಶಹೀದ್​ ದಿವಸ್​ (ಹುತಾತ್ಮರ ದಿನ) ಎಂದು ಆಚರಿಸಲಾಗುತ್ತಿದೆ.

ಪ್ರಧಾನಿ ಮೋದಿ ನಮನ: ನಾನು ಬಾಪು ಮತ್ತು ಅವರ ಆಲೋಚನೆಗಳಿಗೆ ನಮಿಸುತ್ತೇನೆ. ದೇಶಕ್ಕಾಗಿ ತ್ಯಾಗ, ಸೇವೆ ಮಾಡಿದ ಎಲ್ಲ ಹುತಾತ್ಮರಿಗೂ ಗೌರವ ಸಮರ್ಪಿಸುತ್ತೇವೆ. ಅವರ ತ್ಯಾಗಗಳನ್ನು ಮರೆಯಲು ಸಾಧ್ಯವಿಲ್ಲ. ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಕೆಲಸ ಮಾಡುವ ನಮ್ಮ ಸಂಕಲ್ಪವನ್ನು ಇದು ಬಲಪಡಿಸುತ್ತದೆ ಎಂದು ಟ್ವೀಟ್​ ಮೂಲಕ ತಿಳಿಸಿದ್ದಾರೆ. ಬಿಜೆಪಿ ಕೂಡ ರಾಷ್ಟ್ರಪಿತನ ಸ್ಮರಣೆ ಮಾಡಿದ್ದು ಜಗತ್ತಿಗೆ ಸತ್ಯ ಮತ್ತು ಅಹಿಂಸೆಯ ದಾರಿ ತೋರಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪುಣ್ಯತಿಥಿಯ ನಮನಗಳು ಎಂದಿದೆ.

ಕಾಂಗ್ರೆಸ್​ನಿಂದ ಗೌರವ ಸಲ್ಲಿಕೆ: ಮಹಾತ್ಮ ಗಾಂಧಿ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಕೂಡ ಬಾಪುರನ್ನು ನೆನೆದು ಟ್ವೀಟ್​ ಮಾಡುವ ಮೂಲಕ ಗೌರವ ಸಲ್ಲಿಸಿದೆ. ಮಹಾತ್ಮ ಗಾಂಧಿಯವರೊಂದಿಗೆ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದ ಎಲ್ಲಾ ವೀರ ಪುರುಷರು ಮತ್ತು ಮಹಿಳೆಯರನ್ನು ನಾವು ಗೌರವಿಸುತ್ತೇವೆ ಎಂದು ತಿಳಿಸಿದೆ.

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಬಾಪು ಅವರು ಇಡೀ ದೇಶವನ್ನು ಪ್ರೀತಿ, ಸರ್ವಧರ್ಮ ಸಮಾನತೆಯಿಂದ ಬದುಕಲು ಮತ್ತು ಸತ್ಯಕ್ಕಾಗಿ ಹೋರಾಡಲು ಕಲಿಸಿದರು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರಿಗೆ ಅವರ ಹುತಾತ್ಮ ದಿನದಂದು ಕೋಟ್ಯಂತರ ನಮನಗಳು ಎಂದು ಟ್ವೀಟ್ ಮಾಡಿದ್ದಾರೆ.

ಸಿಎಂ ಬೊಮ್ಮಾಯಿ ಅವರಿಂದ ನಮನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿ, ಸತ್ಯ ಹಾಗೂ ಅಹಿಂಸೆಯ ಪ್ರತೀಕ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪುಣ್ಯಸ್ಮರಣೆಯಂದು ಅವರಿಗೆ ನನ್ನ ಗೌರವಪೂರ್ವಕ ನಮನಗಳು. ಮಹಾತ್ಮರ ಜೀವನ ಮತ್ತು ಸಂದೇಶಗಳು ಮನುಕುಲಕ್ಕೆ ಸದಾ ದಾರಿದೀಪವಾಗಿವೆ ಎಂದಿದ್ದಾರೆ.

ರಾಜ್​ಘಾಟ್​ನಲ್ಲಿ ನಮನ:ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೆ ಈ ದಿನ ಗೌರವ ನಮನ ಸಲ್ಲಿಸಲಾಗುವುದು. ಇದರ ಜೊತೆಗೆ, ಜನವರಿ 30 ಅನ್ನು ಅಹಿಂಸೆ ಮತ್ತು ಶಾಂತಿಯ ದಿನವಾಗಿಯೂ ಆಚರಿಸಲಾಗುತ್ತಿದೆ. ಮಹಾತ್ಮ ಗಾಂಧಿ ಪುಣ್ಯ ಸ್ಮರಣೆಯ ಈ ದಿನದಂದು ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ, ರಕ್ಷಣಾ ಸಚಿವರು ಮತ್ತು ಸೇನೆ, ವಾಯುಪಡೆ ಮತ್ತು ನೌಕಾಪಡೆ ಮುಖ್ಯಸ್ಥರು, ದೆಹಲಿಯ ರಾಜ್ ಘಾಟ್‌ನಲ್ಲಿರುವ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ದೇಶದಾದ್ಯಂತ ಭಾರತೀಯ ಹುತಾತ್ಮರ ಸ್ಮರಣಾರ್ಥ ಎರಡು ನಿಮಿಷಗಳ ಮೌನ ಆಚರಿಸಲಾಗುತ್ತದೆ.

ಇದನ್ನೂ ಓದಿ: ಭಾರತ್​ ಜೋಡೋ ಇಂದು ಶ್ರೀನಗರದಲ್ಲಿ ಸಮಾರೋಪ; ಪಕ್ಷದ ಮುಖ್ಯ ಕಚೇರಿಯಲ್ಲಿ ಧ್ವಜಾರೋಹಣ, ರ್‍ಯಾಲಿ

Last Updated : Jan 30, 2023, 12:37 PM IST

ABOUT THE AUTHOR

...view details