ಸೊಲ್ಲಾಪುರ (ಮಹಾರಾಷ್ಟ್ರ):ಪ್ರೇಮ ವಿವಾಹಕ್ಕೆ ತಂದೆ ವಿರೋಧ ವ್ಯಕ್ತಪಡಿಸಿದ್ದರಿಂದ ಮಗಳು ತಂದೆಯ ಹತ್ಯೆಗೆ ಸಂಚು ರೂಪಿಸಿದ್ದಾಳೆ. ಕೊಲೆ ಮಾಡಲು ನಾಲ್ವರಿಗೆ 60 ಸಾವಿರ ರೂ. ಸುಪಾರಿ (ತಲಾ 15 ಸಾವಿರ) ನೀಡಿದ್ದಾಳೆ. ಸೊಲ್ಲಾಪುರದ ಮಾಧಾ ಪೊಲೀಸರು ಕೂಲಂಕಷವಾಗಿ ವಿಚಾರಣೆ ನಡೆಸಿದ ಬಳಿಕ ಯುವತಿ, ಪ್ರಿಯಕರ ಹಾಗೂ ತಂದೆಯ ಮೇಲೆ ಹಲ್ಲೆ ನಡೆಸಿದ ನಾಲ್ವರನ್ನು ಬಂಧಿಸಿದ್ದಾರೆ. ತಾಲೂಕಿನ ವಡಚಿ ವಾಡಿಯಲ್ಲಿ ಈ ಘಟನೆ ನಡೆದಿದೆ.
ಗಾಯಾಳು ಯವತಿಯ ತಂದೆ ಮಾದ ತಾಲೂಕಿನ ನಿವಾಸಿ ಮಹೇಂದ್ರ ಶಾ ಎಂದು ಗುರುತಿಸಲಾಗಿದೆ. ಸಾಕ್ಷಿ ಶಾ ಮತ್ತು ಆಕೆಯ ಗೆಳೆಯ ಚೈತನ್ಯ ಆರೋಪಿಗಳು. ಖ್ಯಾತ ಉದ್ಯಮಿಯೂ ಆಗಿರುವ ಮಹೇಂದ್ರ ಶಾ ಅವರಿಗೆ ತೀವ್ರವಾಗಿ ಥಳಿಸಲಾಗಿದೆ.
ಸಂಪೂರ್ಣ ವಿವರ :ಮಾಧಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ವರದಿಯ ಪ್ರಕಾರ, ಪ್ರಿಯಕರನ ಸಹಾಯದಿಂದ ಯುವತಿಯ ತಂದೆಯ ಮೇಲೆ ಹಲ್ಲೆ ನಡೆಸಲಾಗಿದೆ. ಯುವತಿಗೆ ಮನೆಯಿಂದ ಓಡಿ ಹೋಗಿ ಮದುವೆಯಾಗಲು ತೀವ್ರ ವಿರೋಧವಿತ್ತು. ತಂದೆಯ ಕಾಲುಗಳನ್ನು ಮುರಿದರೆ, ಅವರು ಮದುವೆಯಾಗಲು ಅಡ್ಡಿ ಬರುವುದಿಲ್ಲ ಎಂದು ತಿಳಿದ ಪುತ್ರಿ ಈ ರೀತಿಯ ಭಯಾನಕ ಸಂಚು ರೂಪಿಸಿದ್ದಾಳೆ. ಇದಕ್ಕಾಗಿ ಸಾಕ್ಷಿ, ಪ್ರಿಯಕರ ಹಾಗೂ ಆತನ ನಾಲ್ವರು ಸಹಚರರು ಸೇರಿದಂತೆ ಒಟ್ಟು ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಾಕ್ಷಿ ಶಾ ಪುಣೆಗೆ ಹೋಗಿದ್ದರು. ಸೋಮವಾರ ಸಂಜೆ ಶಿವಶಾಹಿ ಎಸ್‌ಟಿ ಬಸ್ ಶೆಟ್‌ಫಾಲ್‌ನಿಂದ ಹೊರಟಿದ್ದಾರೆ. ಸಾಕ್ಷಿ ಪುಣೆಯಿಂದ ಮಾದವರೆಗೆ ಬಂದಿದ್ದಳು. ಅಲ್ಲಿಂದ ಪುತ್ರಿಯೊಂದಿಗೆ ತಂದೆ ಮಹೇಂದ್ರ ಶಾ ಕಾರ್ನಲ್ಲಿ ಹೊರಟಿದ್ದಾರೆ. ಶೆಟ್‌ಫಾಲ್ ಮತ್ತು ವಡಚಿವಾಡಿ ನಡುವೆ ಸಾಕ್ಷಿ ವಾಶ್ರೂಮ್ಗೆ ಹೋಗಬೇಕು ಎಂಬ ನೆಪದಲ್ಲಿ ತಂದೆಗೆ ಕಾರ್ ನಿಲ್ಲಿಸುವಂತೆ ಕೇಳಿದ್ದಾಳೆ.
2 ಬೈಕ್‌ಗಳಲ್ಲಿ ಬಂದ ನಾಲ್ವರು:ಈ ವೇಳೆ, ಎರಡು ಬೈಕ್‌ಗಳಲ್ಲಿ ಹಿಂದಿನಿಂದ ಬಂದ ನಾಲ್ವರು ಮಹೇಂದ್ರ ಶಾಗೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ತಲೆಗೆ ಹಲ್ಲೆ ಮಾಡಿದ್ದರಿಂದ ತೀವ್ರ ರಕ್ತಸ್ರಾವವಾಗಿದೆ. ತಕ್ಷಣವೇ ಹಂತಕರು ಸ್ಥಳದಿಂದ ಓಡಿ ಹೋಗಿದ್ದಾರೆ. ಶಾ ಕಿರುಚುತ್ತಿದ್ದಂತೆ ವಡಚಿವಾಡಿ ಸ್ಥಳೀಯರಾದ ಬಾಪು ಕಾಳೆ ಮತ್ತು ರಾಮ್ ಚರಣ್ ಡೋಂಗ್ರೆ ಸ್ಥಳಕ್ಕೆ ಧಾವಿಸಿದ್ದಾರೆ. ಮಹೇಂದ್ರ ಶಾರನ್ನು ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಪೊಲೀಸರಿಂದ ಸಮಗ್ರ ತನಿಖೆ:ತಂದೆಯನ್ನು ಕೊಲ್ಲಲು ಪುತ್ರಿ ನಾಲ್ವರಿಗೆ ಹಣ ನೀಡಿದ್ದಳು. ಸಂಚಿನಲ್ಲಿ ಗೆಳೆಯ ಚೈತನ್ಯ ಕೂಡ ಭಾಗಿಯಾಗಿದ್ದ. ಶೆಟ್ಫಾಳ ಪ್ರದೇಶದಿಂದ ಸಮೀಪದಲ್ಲಿ ತನ್ನ ತಂದೆಯೊಂದಿಗೆ ಹೋಗುತ್ತಿದ್ದಾಗ ಸಾಕ್ಷಿ, ಚೈತನ್ಯ ನಿರ್ಧರಿಸಿದಂತೆ ವರ್ತಿಸಿದ್ದಳು. ಪೊಲೀಸರು ಸಮಗ್ರ ತನಿಖೆ ನಡೆಸಿದ ಬಳಿಕ ಪ್ರಕರಣದ ಸತ್ಯ ಬಯಲಾಗಿದೆ.
ಇದನ್ನೂ ಓದಿ:Hassan murder: ಹಾಡಹಗಲೇ ಮಾಜಿ ಸಚಿವ ರೇವಣ್ಣರ ಆಪ್ತನ ಬರ್ಬರ ಹತ್ಯೆ!