ಕರ್ನಾಟಕ

karnataka

By

Published : May 11, 2021, 5:32 PM IST

ETV Bharat / bharat

45 ವರ್ಷ ಮೇಲ್ಪಟ್ಟವರಿಗೆ, 3 ಲಕ್ಷ ಕೊವಾಕ್ಸಿನ್ ನೀಡಲು ನಿರ್ಧರಿಸಿದ 'ಮಹಾ' ಸರ್ಕಾರ

ಇದು ಆರೋಗ್ಯ ಕಾರ್ಯಕರ್ತರು, ಕಾರ್ಮಿಕರು ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ನೀಡಲಾಗುವುದು. ಆದರೂ ರಾಜ್ಯಗಳು ಮತ್ತು ಖಾಸಗಿ ಆಸ್ಪತ್ರೆಗಳು 18 ರಿಂದ 44 ವರ್ಷದೊಳಗಿನ ವ್ಯಕ್ತಿಗಳಿಗೆ ರೋಗನಿರೋಧಕ ಚುಚ್ಚುಮದ್ದನ್ನು ನೀಡಲು ಶೇಕಡಾ 50 ರಷ್ಟು ಲಸಿಕೆಗಳನ್ನು ಸಂಗ್ರಹಿಸಬೇಕಾಗುತ್ತದೆ..

maharashtra-to-divert-3-lakh
3 ಲಕ್ಷ ಕೊವಾಕ್ಸಿನ್ ನೀಡಲು ನಿರ್ಧರಿಸಿದ 'ಮಹಾ' ಸರ್ಕಾರ

ಮುಂಬೈ :ಕೋವಿಡ್-19 ಲಸಿಕೆ ಕೊರತೆಯ ಮಧ್ಯೆ 18-44 ವಯಸ್ಸಿನ ವರ್ಗಕ್ಕೆ ಖರೀದಿಸಿದ ಮೂರು ಲಕ್ಷ ಬಾಟಲುಗಳನ್ನು (ಕೊವಾಕ್ಸಿನ್) 45 ವರ್ಷದವರಿಗೆ ನೀಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.

ಓದಿ: ನಾಳೆಯಿಂದ 10 ದಿನಗಳವರೆಗೆ ತೆಲಂಗಾಣದಲ್ಲಿ ಲಾಕ್​ಡೌನ್ ಜಾರಿ

ನಿಗದಿತ ಸಮಯದಲ್ಲಿ ಎರಡನೇ ಡೋಸ್ ನೀಡದಿದ್ದರೆ ಲಸಿಕೆಯು ಹೆಚ್ಚಾಗಿ ಪರಿಣಾಮ ಬೀರುತ್ತದೆ. ಅಂತಹ ಆರೋಗ್ಯ ಬಿಕ್ಕಟ್ಟನ್ನು ತಪ್ಪಿಸಲು, 18-44 ವಯಸ್ಸಿನ ವರ್ಗಕ್ಕೆ ಖರೀದಿಸಿದ ಮೂರು ಲಕ್ಷ ಬಾಟಲುಗಳನ್ನು (ಕೊವಾಕ್ಸಿನ್) 45 ವರ್ಷದವರಿಗೆ ನೀಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ ಎಂದು ರಾಜ್ಯ ಆರೋಗ್ಯ ಸಚಿವ ರಾಜೇಶ್ ಟೊಪೆ ಹೇಳಿದರು.

45 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಎರಡನೇ ಡೋಸ್ ನೀಡಲು ಕೋವಾಕ್ಸಿನ್‌ನ 35,000 ಬಾಟಲುಗಳು ಮಾತ್ರ ಪ್ರಸ್ತುತ ರಾಜ್ಯ ಸರ್ಕಾರದಲ್ಲಿ ಲಭ್ಯವಿದೆ. ಲಿಬರಲೈಸ್ಡ್ ಪ್ರೈಸಿಂಗ್ ಮತ್ತು ಆಕ್ಸಿಲರೇಟೆಡ್ ನ್ಯಾಷನಲ್ ಕೋವಿಡ್-19 ವ್ಯಾಕ್ಸಿನೇಷನ್ ಸ್ಟ್ರಾಟಜಿ ಪ್ರಕಾರ, ಸರ್ಕಾರಿ ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ ಉಚಿತವಾಗಿದೆ.

ಇದು ಆರೋಗ್ಯ ಕಾರ್ಯಕರ್ತರು, ಕಾರ್ಮಿಕರು ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ನೀಡಲಾಗುವುದು. ಆದರೂ ರಾಜ್ಯಗಳು ಮತ್ತು ಖಾಸಗಿ ಆಸ್ಪತ್ರೆಗಳು 18 ರಿಂದ 44 ವರ್ಷದೊಳಗಿನ ವ್ಯಕ್ತಿಗಳಿಗೆ ರೋಗನಿರೋಧಕ ಚುಚ್ಚುಮದ್ದನ್ನು ನೀಡಲು ಶೇಕಡಾ 50 ರಷ್ಟು ಲಸಿಕೆಗಳನ್ನು ಸಂಗ್ರಹಿಸಬೇಕಾಗುತ್ತದೆ ಎಂದರು.

ABOUT THE AUTHOR

...view details