ಥಾಣೆ(ಮಹಾರಾಷ್ಟ್ರ):ಬೆಳಗಿನ ಉಪಹಾರದಲ್ಲಿ ಉಪ್ಪು ಹೆಚ್ಚಾಗಿದೆ ಎಂಬ ಕಾರಣದಿಂದ ವ್ಯಕ್ತಿಯೋರ್ವ ಕಟ್ಟಿಕೊಂಡ ಹೆಂಡ್ತಿಯನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ. ಮಹಾರಾಷ್ಟ್ರದ ಥಾಣೆಯ ಭಾಯಂದರ್ ಟೌನ್ಶಿಪ್ನಲ್ಲಿ ಈ ಪ್ರಕರಣ ನಡೆದಿದೆ ಎಂದು ಪೊಲೀಸರು ಮಾಹಿತಿ ತಿಳಿಸಿದ್ದಾರೆ.
46 ವರ್ಷದ ನಿಲೇಶ್ ಘಾಘ್ ಎಂಬಾತ ಈ ಕೊಲೆ ಮಾಡಿದ್ದು, 40 ವರ್ಷದ ಪತ್ನಿ ನಿರ್ಮಲಾ ಕೊಲೆಯಾಗಿದ್ದಾಳೆ. ಇಂದು ಬೆಳಗ್ಗೆ ಉಪಹಾರಕ್ಕಾಗಿ ನಿರ್ಮಲಾ ಖಿಚಡಿ ತಯಾರಿಸಿದ್ದಳು. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಪ್ಪು ಇತ್ತು. ಈ ವಿಚಾರಕ್ಕಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಈ ವೇಳೆ ಆಕ್ರೋಶಗೊಂಡಿರುವ ನಿಲೇಶ್ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.