ಮುಂಬೈ(ಮಹಾರಾಷ್ಟ್ರ) :ಕೋವಿಡ್ನಿಂದಾಗಿ ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಆನ್ಲೈನ್ ಮೂಲಕ ತರಗತಿಗಳು ನಡೆದಿವೆ. ಈಗ ದಿಢೀರ್ ಆಗಿ ಆಫ್ಲೈನ್ ಪರೀಕ್ಷೆ ನಡೆಸಲು ಘೋಷಣೆ ಮಾಡಲಾಗಿದೆ. ಮಹಾರಾಷ್ಟ್ರ ರಾಜ್ಯ ಸರ್ಕಾರದ ಈ ನಿರ್ಧಾರ ಖಂಡಿಸಿ ಸಾವಿರಾರು ವಿದ್ಯಾರ್ಥಿಗಳು ಇಂದು ಪ್ರತಿಭಟಿಸಿದರು.
ಪುಣೆಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಂದ ಪ್ರತಿಭಟನೆ ಮಹಾರಾಷ್ಟ್ರ ಶಿಕ್ಷಣ ಸಚಿವ ವರ್ಷಾ ಏಕನಾಥ್ ಗಾಯಕ್ವಾಡ್ ಅವರ ನಿವಾಸದ ಎದುರು ವಿದ್ಯಾರ್ಥಿಗಳು ಪ್ರತಿಭಟಿಸಿದರು. ಕೋವಿಡ್ ಬಿಕ್ಕಟ್ಟಿನಿಂದಾಗಿ ರಾಜ್ಯದಲ್ಲಿ 10 ಮತ್ತು 12ನೇ ತರಗತಿಗಳಿಗೆ ಆನ್ಲೈನ್ ಮೂಲಕವೇ ನಡೆದಿದ್ದು, ಇದೀಗ ಆಫ್ಲೈನ್ ಪರೀಕ್ಷೆ ನಡೆಸಲು ಮುಂದಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ಇದನ್ನೂ ಓದಿರಿ:RRR ಚಿತ್ರ ಬಿಡುಗಡೆಗೆ ಮತ್ತೊಂದು ಮುಹೂರ್ತ ಫಿಕ್ಸ್..
ಆನ್ಲೈನ್ ಮೂಲಕ ಕೋರ್ಸ್ ನಡೆದಿರುವ ಕಾರಣ ಕೆಲ ವಿಷಯಗಳ ಬಗ್ಗೆ ನಮಗೆ ಅರ್ಥವಾಗಿಲ್ಲ. 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆ ರದ್ಧುಗೊಳಿಸಬೇಕು. ಇಲ್ಲವೇ ಆನ್ಲೈನ್ ಮೂಲಕವೇ ಪರೀಕ್ಷೆ ನಡೆಸುವಂತೆ ಅವರು ಪಟ್ಟು ಹಿಡಿದರು.
ಮಾಹಾರಾಷ್ಟ್ರದಲ್ಲಿ ಮಾರ್ಚ್ 4ರಿಂದ 12ರವರೆಗೆ 12ನೇ ತರಗತಿ ಬೋರ್ಡ್ ಪರೀಕ್ಷೆ ಆಫ್ಲೈನ್ ಮೂಲಕ ನಡೆಸಲು ದಿನಾಂಕ ನಿಗದಿಯಾಗಿದೆ. ಮಾರ್ಚ್ 15ರಿಂದ 10ನೇ ತರಗತಿ ಪರೀಕ್ಷೆ ಆರಂಭಗೊಳ್ಳಲಿವೆ. ಶಿಕ್ಷಣ ಸಚಿವರ ಈ ನಿರ್ಧಾರ ವಿರೋಧಿಸಿ ಪುಣೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟಿಸಿದರು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ