ಮಹಾರಾಷ್ಟ್ರ :ಕಾಲೇಜು ವಿದ್ಯಾರ್ಥಿನಿ ಒಬ್ಬರು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರ ನಾಂದೇಡ್ನಲ್ಲಿ ನಡೆದಿದೆ. ಇಲ್ಲಿನ ಶ್ರೀ ಗುರು ಗೋವಿಂದಸಿಂಗ್ಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಮೆಕ್ಯಾನಿಕಲ್ ಮೂರನೇ ವರ್ಷದಲ್ಲಿ ಓದುತ್ತಿದ್ದ ಗೀತಾ ಕಲ್ಯಾಣ್ ಕದಮ್ (22) ಬುಧವಾರ ಸ್ನೇಹಿತನ ಕಿರುಕುಳ ತಾಳಲಾರದೇ ಹಾಸ್ಟೇಲ್ನಲ್ಲಿ ನೇಣಿಗೆ ಶರಣಾಗಿದ್ದಾಳೆ.
ಯುವತಿ ಡೆತ್ನೋಟ್ನಲ್ಲಿ 'ತನ್ನ ಸಾವಿಗೆ ಕಾಲೇಜಿನ ಸ್ನೇಹಿತ ಆದೇಶ್ ಚೌಧರಿ ಕಾರಣ. ಆತ ಫೋಟೋ ಬಳಸಿಕೊಂಡಿ ಕಿರುಕುಳ ನೀಡುತ್ತಿದ್ದ. ಅವನ ಕಿರುಕುಳ ತಾಳಲಾರದೇ ಒಬ್ಬಂಟಿಯಾಗಿರ ಬೇಕಾಯಿತು. ಆದರೂ ತೊಂದರೆ ಕೊಡುತ್ತಿದ್ದ. ಅವನಿಗೆ ಗಲ್ಲು ಶಿಕ್ಷೆ ಆಗಬೇಕು' ಎಂದು ಬರೆದುಕೊಂಡಿದ್ದಾರೆ.