ನಾಗ್ಪುರ: ಕೊರೊನಾ ಪ್ರಕರಣ ದಿನೇ ದಿನೆ ದೇಶದಲ್ಲಿ ಏರಿಕೆಯಾಗುತ್ತಿದೆ. ಮುಖ್ಯವಾಗಿ ಮಹಾರಾಷ್ಟ್ರದಲ್ಲಿ ಈಗಾಗಲೇ 23, 14,4.13 ಕೊರೊನಾ ಕೇಸುಗಳು ಪತ್ತೆಯಾಗಿದೆ.
ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಹಾವಳಿ ಜಾಸ್ತಿ ಆಗುತ್ತಿದ್ದು, ಸೋಂಕಿತರು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾಗ್ಪುರದಲ್ಲಿ ಅಲ್ಲಿನ ಸರ್ಕಾರ ಇಂದಿನಿಂದ1 ವಾರಗಳ ಕಾಲ ಲಾಕ್ಡೌನ್ ಜಾರಿ ಮಾಡಿ ಆದೇಶಿಸಿದೆ.
ಇದನ್ನು ಓದಿ: ಸಿಲಿಕಾನ್ ಸಿಟಿಯಲ್ಲಿ ಶೀಘ್ರವೇ ದೇಶದ ಮೊದಲ 'ಎಸಿ ರೈಲು ನಿಲ್ದಾಣ' ನಾಡಿಗೆ ಸಮರ್ಪಣೆ: ಕೇಂದ್ರ ಸಚಿವ
ಇಂದಿನಿಂದ ಆದೇಶ ಜಾರಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ರಸ್ತೆಗಳು ಬಿಕೋ ಎನ್ನುತ್ತಿವೆ. ರಸ್ತೆಗಳ ಮೇಲೆ ಜನ ಕಾಣಿಸಿಕೊಳ್ಳುತ್ತಿಲ್ಲ. ಮಹಾರಾಷ್ಟ್ರದಲ್ಲಿ ನಿನ್ನೆ ಈ ವರ್ಷದ ಗರಿಷ್ಠ 16,620 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿದೆ.
ದಾದರ್ ಮಾರುಕಟ್ಟೆ ಪ್ರದೇಶದಲ್ಲಿ ಜನಸಂದಣಿ ಆದರೆ ಇಲ್ಲಿನ ದಾದರ್ ಮಾರುಕಟ್ಟೆ ಪ್ರದೇಶದಲ್ಲಿ ಜನಸಂದಣಿ ಕಂಡುಬಂದಿದೆ. ಕೊರೊನಾ ಮುಂಜಾಗೃತಾ ಕ್ರಮವಾಗಿ ಸರ್ಕಾರ ನಾಗ್ಪುರವನ್ನು ಲಾಕ್ಡೌನ್ ಮಾಡಿ ಆದೇಶ ನೀಡಿದ್ದರೂ ಸಹ ದಾದರ್ ಮಾರುಕಟ್ಟೆಯಲ್ಲಿ ಜನಸ್ತೋಮವೇ ಕಂಡುಬಂತು.