ಮುಂಬೈ: ಮಹಾರಾಷ್ಟ್ರದಲ್ಲಿ ಮಹಾಮಾರಿ ಕೊರೊನಾ ವೈರಸ್ ಹಾವಳಿ ನಿಲ್ಲುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ. ಕಳೆದ 24 ಗಂಟೆಯಲ್ಲಿ ಹೊಸದಾಗಿ 67,468 ಜನರಿಗೆ ಸೋಂಕು ತಗುಲಿದ್ದು, 568 ಜನರು ಡೆಡ್ಲಿ ವೈರಸ್ಗೆ ಬಲಿಯಾಗಿದ್ದಾರೆ.
ಸದ್ಯ ಮಹಾರಾಷ್ಟ್ರದಲ್ಲಿ 6,95,747 ಸಕ್ರಿಯ ಕೋವಿಡ್ ಪ್ರಕರಣಗಳಿದ್ದು, ಸಾವಿರಾರು ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ವಾಣಿಜ್ಯ ನಗರಿ ಮುಂಬೈನಲ್ಲೇ 8 ಸಾವಿರ ಕೇಸ್ ದಾಖಲಾಗಿದ್ದು, ನಾಗ್ಪುರ್ದಲ್ಲಿ 7,229 ಪ್ರಕರಣ ಕಳೆದ 24 ಗಂಟೆಯಲ್ಲಿ ಕಾಣಿಸಿಕೊಂಡಿವೆ.
ಉಳಿದಂತೆ ಆಂಧ್ರಪ್ರದೇಶದಲ್ಲಿ 9,719 ಪ್ರಕರಣ,ಗೋವಾದಲ್ಲಿ 1,502 ಕೇಸ್, ಕರ್ನಾಟಕದಲ್ಲಿ 23,558 ಹೊಸ ಕೋವಿಡ್ ಪ್ರಕರಣ ಕಾಣಿಸಿಕೊಂಡಿವೆ. ಕೇರಳದಲ್ಲೂ ಕೊರೊನಾ ಸೋಂಕು ಉಲ್ಭಣಗೊಂಡಿದ್ದು ಕಳೆದ 24 ಗಂಟೆಯಲ್ಲಿ 22,414 ಹೊಸ ಕೇಸ್ ದಾಖಲಾಗಿದ್ದು, 22 ಜನರು ಸಾವನ್ನಪ್ಪಿದ್ದಾರೆ.
ಗುಜರಾತ್ನಲ್ಲಿ 12,553 ಪ್ರಕರಣ, ಉತ್ತರಾಖಂಡ್ನಲ್ಲಿ 4,807 ಕೇಸ್, ಉತ್ತರ ಪ್ರದೇಶದಲ್ಲಿ 33,214 ಪ್ರಕರಣ ದಾಖಲಾಗಿದ್ದು, 187 ಜನರು ವೈರಸ್ಗೆ ಬಲಿಯಾಗಿದ್ದಾರೆ. ತಮಿಳುನಾಡಿನಲ್ಲಿ 11,681 ಪ್ರಕರಣ ಕಾಣಿಸಿಕೊಂಡಿದ್ದು, 53 ಜನರು ಸಾವಿಗೀಡಾಗಿದ್ದಾರೆ. ಬಿಹಾರದಲ್ಲೂ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದ್ದು, ಇಲ್ಲಿನ ಏಮ್ಸ್ ಆಸ್ಪತ್ರೆಯಲ್ಲಿ 384 ವೈದ್ಯಕೀಯ ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡಿದೆ. ಇದರ ಮಧ್ಯೆ ಬಿಹಾರದಲ್ಲಿನ ಪಂಚಾಯ್ತಿ ಚುನಾವಣೆ ಮುಂದೂಡಿಕೆ ಮಾಡಿ ಆದೇಶ ಹೊರಡಿಸಲಾಗಿದೆ.
ಲೋಕಸಭಾ ವಿಪಕ್ಷ ನಾಯಕ ಅಧೀರ್ ರಂಜನ್ ಚೌಧರಿ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಶಶಿ ತರೂರ್ಗೂ ಕೊರೊನಾ ಸೋಂಕು ದೃಢಗೊಂಡಿದೆ.