ಪುಣೆ(ಮಹಾರಾಷ್ಟ್ರ) :ಕೊರೊನಾದಿಂದ ಚೇತರಿಸಿಕೊಳ್ಳುತ್ತಿದ್ದ ಮಹಾರಾಷ್ಟ್ರದಲ್ಲಿ ಮತ್ತೆ ವೈರಸ್ ಅಬ್ಬರಿಸುತ್ತಿದೆ. ಕಳೆದ 24 ಗಂಟೆಗಳಲ್ಲಿ 25,833 ಸೋಂಕಿತರು ಪತ್ತೆಯಾಗಿದ್ದು, 58 ಸಾವು ವರದಿಯಾಗಿವೆ.
ಭಾರತದಲ್ಲಿ ನಿನ್ನೆ 39,726 ಕೇಸ್ ಪತ್ತೆಯಾಗಿದ್ದು, 154 ಜನ ಬಲಿಯಾಗಿದ್ದರು. ಇದರಲ್ಲಿ ಮಹಾರಾಷ್ಟ್ರದ ಕೋವಿಡ್ ಸಾವು-ನೋವೇ ಬಹುಪಾಲಿವೆ. ಈಗಾಗಲೇ ನಾಗ್ಪುರದಲ್ಲಿ ಸಂಪೂರ್ಣ ಲಾಕ್ಡೌನ್, ಅಹಮದಾಬಾದ್ನಲ್ಲಿ ನೈಟ್ ಕರ್ಫ್ಯೂ, ಔರಂಗಾಬಾದ್ ಸೇರಿ ಕೆಲ ನಗರಗಳಲ್ಲಿ ಭಾಗಶಃ ಲಾಕ್ಡೌನ್ ಹೇರಲಾಗಿದೆ.