ಮುಂಬೈ: ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಎರಡನೇ ಅಲೆ ಜೋರಾಗಿದೆ. ರಾಜ್ಯದಲ್ಲಿ ಪರಿಸ್ಥಿತಿ ಕೈಮೀರಿ ಹೋಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಇಂದು ಅತ್ಯಧಿಕ 43,183 ಕೋವಿಡ್ ಸೋಂಕಿತ ಪ್ರಕರಣಗಳು ಕಾಣಿಸಿಕೊಂಡಿವೆ.
ಕಳೆದ 24 ಗಂಟೆಗಳ ಅವಧಿಯಲ್ಲಿ 249 ಜನರು ಬಲಿಯಾಗಿದ್ದಾರೆ. ಜತೆಗೆ 32,641 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಪ್ರಮುಖವಾಗಿ ವಾಣಿಜ್ಯ ನಗರಿ ಮುಂಬೈನಲ್ಲೇ 8,646 ಕೋವಿಡ್ ಕೇಸ್ ದಾಖಲಾಗಿದ್ದು, 18 ಜನರು ಸಾವನ್ನಪ್ಪಿದ್ದಾರೆ.
ಮಹಾರಾಷ್ಟ್ರದಲ್ಲಿ ಇಲ್ಲಿಯವರೆಗೆ 28,56,163 ಕೋವಿಡ್ ಕೇಸ್ ಕಾಣಿಸಿಕೊಂಡಿದೆ. 24,33,368 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದರಲ್ಲಿ ಸದ್ಯ 3,66,533 ಸಕ್ರಿಯ ಪ್ರಕರಣಗಳಿದ್ದು, 54,898 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: ಕಾರು ಗಿಫ್ಟ್ ಕೊಟ್ಟ ಮಹೀಂದ್ರಾಗೆ ಕ್ರಿಕೆಟರ್ ನಟರಾಜನ್ ಕೃತಜ್ಞತೆ ಅರ್ಪಿಸಿದ್ದು ಹೀಗೆ!