ಮುಂಬೈ:ಮಹಾರಾಷ್ಟ್ರದಲ್ಲಿ ಮಹಾಮಾರಿ ಕೋವಿಡ್ನ ಎರಡನೇ ಅಲೆ ಜೋರಾಗಿದ್ದು, ಈ ಹಿಂದಿಗಿಂತಲೂ ಸೋಂಕಿತ ಪ್ರಕರಣಗಳ ಸಂಖ್ಯೆ ಇವತ್ತು ಹೆಚ್ಚಾಗಿ ದಾಖಲಾಗಿವೆ. ಕಳೆದ 24 ಗಂಟೆಯಲ್ಲಿ ಬರೋಬ್ಬರಿ 27,126 ಕೇಸ್ ದಾಖಲಾಗಿದ್ದು, 92 ಜನರು ಸಾವನ್ನಪ್ಪಿದ್ದಾರೆ. ಇದರ ಜತೆಗೆ 13,588 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ರಾಜ್ಯದಲ್ಲಿ ಇಲ್ಲಿಯವರೆಗೆ 24,49,147 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 22,03,553 ಜನರು ಗುಣಮುಖರಾಗಿದ್ದು, 53,300 ಜನರು ಸಾವನ್ನಪ್ಪಿದ್ದಾರೆ. ಸದ್ಯ 1,91,006 ಆ್ಯಕ್ಟಿವ್ ಪ್ರಕರಣಗಳಿವೆ. ಲಾಕ್ಡೌನ್ ಆಗಿರುವ ನಾಗ್ಪುರದಲ್ಲೇ 3679 ಕೇಸ್ ಪತ್ತೆಯಾಗಿದ್ದು, 29 ಜನರು ಸಾವನ್ನಪ್ಪಿದ್ದಾರೆ.