ಮುಂಬೈ: ಮಹಾರಾಷ್ಟ್ರದಲ್ಲಿ ಮಹಾಮಾರಿ ಕೊರೊನಾ ವೈರಸ್ ಹಾವಳಿ ಜೋರಾಗಿದೆ. ಕಳೆದ 24 ಗಂಟೆಯಲ್ಲಿ ದಾಖಲೆಯ 25,681 ಪ್ರಕರಣ ದಾಖಲಾಗಿದ್ದು, 70 ಜನರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಹೆಚ್ಚಿದ ಕೊರೊನಾ, ಲಾಕ್ಡೌನ್ ಒಂದು ಆಯ್ಕೆ ಎಂದ ಉದ್ಧವ್ ಠಾಕ್ರೆ!

ರಾಜ್ಯದಲ್ಲಿ ಇಲ್ಲಿಯವರೆಗೆ 24,22,021 ಕೋವಿಡ್ ಪ್ರಕರಣ ದಾಖಲಾಗಿದ್ದು, ಇದರಲ್ಲಿ 21,89,965 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಉಳಿದಂತೆ 53,208 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಕಳೆದ 24 ಗಂಟೆಯಲ್ಲಿ 14,400 ಜನರು ಕೋವಿಡ್ನಿಂದ ಗುಣಮುಖರಾಗಿದ್ದಾರೆ. ಇನ್ನು ಮುಂಬೈನಲ್ಲೇ ದಾಖಲೆಯ 3,062 ಜನರಿಗೆ ಕೋವಿಡ್ ಸೋಂಕು ತಗುಲಿದೆ. ಮಹಾರಾಷ್ಟ್ರದ ನಾಗ್ಪುರ್ನಲ್ಲಿ 3,235 ಕೋವಿಡ್ ಕೇಸ್ ದಾಖಲಾಗಿದ್ದು, 35 ಜನರು ಸಾವನ್ನಪ್ಪಿದ್ದಾರೆ.
ಉಳಿದಂತೆ ಗುಜರಾತ್ನಲ್ಲಿ 1,415 ಕೇಸ್, ಮಧ್ಯಪ್ರದೇಶದಲ್ಲಿ 1140, ಪಂಜಾಬ್ನಲ್ಲಿ ದಾಖಲೆಯ 2,490, ಕರ್ನಾಟಕದಲ್ಲಿ 1,587, ಕೇರಳದಲ್ಲಿ 1,984 ಕೇಸ್, ತಮಿಳುನಾಡಿನಲ್ಲಿ 1,087 ಪ್ರಕರಣ ದಾಖಲಾಗಿವೆ.