ಕರ್ನಾಟಕ

karnataka

ETV Bharat / bharat

ಮತ್ತೆ ಹೆಚ್ಚುತ್ತಿರುವ ಕೊರೊನಾ... ಮಹಾರಾಷ್ಟ್ರದಲ್ಲಿ ಇಂದು 15,817 ಕೇಸ್​​ ಪತ್ತೆ

ಮಹಾಮಾರಿ ಕೊರೊನಾ ವೈರಸ್ ಅಲೆಗೆ ಮಹಾರಾಷ್ಟ್ರ ಮತ್ತೊಮ್ಮೆ ತತ್ತರಿಸಿ ಹೋಗಿದ್ದು, ಕಳೆದ 24 ಗಂಟೆಯಲ್ಲಿ 15 ಸಾವಿರಕ್ಕೂ ಅಧಿಕ ಸೋಂಕಿತ ಪ್ರಕರಣಗಳು ದಾಖಲಾಗಿವೆ.

Maharashtra covid
Maharashtra covid

By

Published : Mar 12, 2021, 8:21 PM IST

ಮುಂಬೈ:ಮಹಾರಾಷ್ಟ್ರದಲ್ಲಿ ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗುತ್ತಿದ್ದು, ನಿನ್ನೆಗಿಂತಲೂ ಇಂದು ಹೆಚ್ಚಿನ ಕೋವಿಡ್ ಸೋಂಕಿತ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಅಲ್ಲಿನ ಜನರಲ್ಲಿ ಮತ್ತಷ್ಟು ಆತಂಕ ಶುರುವಾಗಿದೆ.

ಕಳೆದ 24 ಗಂಟೆಯಲ್ಲಿ 15,817 ಸೋಂಕಿತ ಪ್ರಕರಣಗಳು ದಾಖಲಾಗಿದ್ದು, 56 ಜನರು ಸಾವನ್ನಪ್ಪಿದ್ದಾರೆ. ಇದರ ಜತೆಗೆ 11,344 ಜನರು ಗುಣಮುಖರಾಗಿ ಡಿಸ್ಚಾರ್ಜ್​ ಆಗಿದ್ದಾರೆ. ಕೋವಿಡ್​ ಪ್ರಕರಣ ಹೆಚ್ಚಾಗುತ್ತಿರುವ ಕಾರಣ ಈಗಾಗಲೇ ನಾಗ್ಪುರ್​, ಅಕೋಲಾದಲ್ಲಿ ಲಾಕ್​ಡೌನ್ ಜಾರಿಗೊಳಿಸಲಾಗಿದ್ದು, ಪುಣೆಯಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ: ಕೊರೊನಾ ಆರ್ಭಟ: ಪುಣೆಯಲ್ಲಿ ನೈಟ್​ ಕರ್ಫ್ಯೂ, ಶಾಲಾ-ಕಾಲೇಜ್​ ಬಂದ್​!

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವುದು ನೆರೆಯ ಕರ್ನಾಟಕಕ್ಕೂ ಆತಂಕ ಮೂಡಿಸಿದ್ದು, ಗಡಿ ಭಾಗಗಳಲ್ಲಿ ಹೆಚ್ಚಿನ ಸೋಂಕಿತ ಪ್ರಕರಣ ದಾಖಲಾಗುವ ಸಾಧ್ಯತೆ ದಟ್ಟವಾಗಿದೆ. ಪ್ರಮುಖವಾಗಿ ಮುಂಬೈ, ಥಾಣೆ, ಪುಣೆ, ನಾಗ್ಪುರ್​, ಅಕೋಲಾ ಹಾಗೂ ನಾಶಿಕ್​ದಲ್ಲಿ ಹೆಚ್ಚಿನ ಸೋಂಕಿತ ಪ್ರಕರಣಗಳು ಕಂಡು ಬರುತ್ತಿವೆ.

ABOUT THE AUTHOR

...view details