ಕರ್ನಾಟಕ

karnataka

ETV Bharat / bharat

ಮಹಾ ಮಳೆ ಅವಾಂತರ: ನದಿಯಲ್ಲಿ ಕೊಚ್ಚಿ ಹೋದ ವ್ಯಕ್ತಿ, ಒಬ್ಬನ ರಕ್ಷಣೆ!

ಮಹಾರಾಷ್ಟ್ರದಲ್ಲಿ ಮಳೆ ಮುಂದುವರಿದಿದೆ. ಸಿನಾ ನದಿಯಲ್ಲಿ ಒಬ್ಬ ವ್ಯಕ್ತಿ ಕೊಚ್ಚಿ ಹೋಗಿದ್ದರೆ, ಇನ್ನೊಬ್ಬನನ್ನು ನಾಗರಿಕರು ರಕ್ಷಿಸಿದ್ದಾರೆ.

Maharashtra rain
ಮಹಾ ಮಳೆ ಅವಾಂತರ

By

Published : Oct 22, 2022, 6:42 AM IST

ಅಹಮದ್‌ನಗರ (ಮಹಾರಾಷ್ಟ್ರ):ರಾಜ್ಯದಲ್ಲಿ ವರುಣಾರ್ಭಟ ಮುಂದುವರಿದಿದೆ. ನಿರಂತರ ಮಳೆ ಹಿನ್ನೆಲೆ ಕೃಷಿ ಹಾನಿ ಸೇರಿದಂತೆ ಅಪಾರ ಆಸ್ತಿ ಹಾನಿ ಉಂಟಾಗಿದೆ. ಬಹುತೇಕ ಕಡೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವೆಡೆ ಸೇತುವೆಗಳು ಜಲಾವೃತಗೊಂಡಿದ್ದರಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ.

ನಗರ-ಕಲ್ಯಾಣ ಹೆದ್ದಾರಿಯ ಸಿನಾ ನದಿಯಲ್ಲಿ ಒಬ್ಬ ವ್ಯಕ್ತಿ ಕೊಚ್ಚಿ ಹೋಗಿದ್ದರೆ, ಇನ್ನೊಬ್ಬನನ್ನು ನಾಗರಿಕರು ರಕ್ಷಿಸಿದ್ದಾರೆ. ಸಿನಾ ನದಿ ಪ್ರವಾಹದಿಂದಾಗಿ ನಗರ-ಕಲ್ಯಾಣ ಹೆದ್ದಾರಿಯ ಸೇತುವೆ ಮುಳುಗಡೆಯಾಗಿದೆ.

ಇದರಿಂದ ನಗರ-ಕಲ್ಯಾಣ ಸಂಚಾರ ಸ್ಥಗಿತಗೊಂಡಿದೆ. ನಾಗರಿಕರು ಸೇತುವೆ ದಾಟದಂತೆ ಈ ಸ್ಥಳದಲ್ಲಿ ಪೊಲೀಸರು ಮತ್ತು ಪುರಸಭೆ ಆಡಳಿತ ವ್ಯವಸ್ಥೆ ಮಾಡಿದೆ. ಆದರೆ ಕೆಲವರು ನೀರು ಹರಿಯುತ್ತಿದ್ದರೂ ಸೇತುವೆ ದಾಟಲು ಯತ್ನಿಸುತ್ತಿರುವುದು ಕಂಡು ಬರುತ್ತಿದೆ.

ಇದನ್ನೂ ಓದಿ:ಭೂದಾನ ಚಳವಳಿಗೆ 60 ವರ್ಷ: 1.60 ಲಕ್ಷ ಎಕರೆ ಭೂಮಿ ದಾನಕ್ಕೆ ಯೋಗ್ಯ ಎಂದು ತಿಳಿದಿದ್ದು ಈಗ!

ABOUT THE AUTHOR

...view details