ಕರ್ನಾಟಕ

karnataka

ETV Bharat / bharat

ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ, ಛತ್ತೀಸ್‌ಗಢ, ಗುಜರಾತ್​ನಲ್ಲಿ ಕೊರೊನಾ ತೀವ್ರ ಏರಿಕೆ - ದೈನಂದಿನ COVID-19 ಪ್ರಕರಣಗಳಲ್ಲಿ ತೀವ್ರ ಏರಿಕೆ

ಮಹಾರಾಷ್ಟ್ರ, ಗುಜರಾತ್, ಪಂಜಾಬ್, ಮಧ್ಯಪ್ರದೇಶ, ದೆಹಲಿ, ತಮಿಳುನಾಡು, ಛತ್ತೀಸ್‌ಗಢ, ಕರ್ನಾಟಕ, ಹರಿಯಾಣ ಮತ್ತು ರಾಜಸ್ಥಾನಗಳಲ್ಲಿ ದೈನಂದಿನ ಹೊಸ ಪ್ರಕರಣಗಳು ಮೇಲ್ಮುಖವಾಗಿ ತಮ್ಮ ಪಥವನ್ನು ಪ್ರದರ್ಶಿಸುತ್ತಿವೆ. ಈ ಮುಖಾಂತರ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ.

Maharashtra, Punjab, Karnataka, Chhattisgarh, Gujarat register sharp rise in daily COVID-19 cases
ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ, ಛತ್ತೀಸ್‌ಗಢ, ಗುಜರಾತ್​ನಲ್ಲಿ ಕೊರೊನಾ ತೀವ್ರ ಏರಿಕೆ !

By

Published : Mar 26, 2021, 7:46 PM IST

Updated : Mar 26, 2021, 8:26 PM IST

ನವದೆಹಲಿ: ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ, ಛತ್ತೀಸ್‌ಗಢ ಮತ್ತು ಗುಜರಾತ್ ರಾಜ್ಯಗಳಲ್ಲಿ ದೈನಂದಿನ COVID-19 ಪ್ರಕರಣಗಳಲ್ಲಿ ತೀವ್ರ ಏರಿಕೆ ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಇನ್ನು ದೇಶದಲ್ಲಿ ಇಂದು ಒಂದೇ ದಿನ 59,118 ಹೊಸ ಕೊರೊನಾ ಪ್ರಕರಣ ದಾಖಲಾಗಿವೆ. ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಕೊರೊನಾ ಪ್ರಕರಣ ಕಂಡುಬಂದಿವೆ. ಫೆಬ್ರವರಿ ಮಧ್ಯದಲ್ಲಿ ಕಡಿಮೆ ಇದ್ದ ಕೊರೊನಾ ಸಂಖ್ಯೆ ಈಗ ದಿಢೀರನೆ ಏರಿಕೆಯಾಗುತ್ತಿದೆ. ಈ ವರ್ಷದ ಫೆಬ್ರವರಿ 2 ರಂದು 8,635 ಕೊರೊನಾ ಪ್ರಕರಣಗಳು ಕಂಡು ಬಂದಿದ್ದವು. ಹಾಗೆ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ ಫೆಬ್ರವರಿ 12 ರಂದು 1,35,926 ಇದ್ದವು. ಈಗ ದೇಶದಲ್ಲಿ 4.21 ಲಕ್ಷ ಸಕ್ರಿಯ ಪ್ರಕರಣಗಳಿವೆ. ಇದನ್ನು ಗಮನಿಸಿದರೆ ಒಂದು ದಿನದಲ್ಲಿ ಸುಮಾರು 25,874 ಜನರಿಗೆ ಸೋಂಕು ದೃಢಪಟ್ಟಿದೆ.

ಮೂರು ರಾಜ್ಯಗಳಲ್ಲಿ ಕೊರೊನಾರ್ಭಟ:

ಮೂರು ರಾಜ್ಯಗಳಾದ ಮಹಾರಾಷ್ಟ್ರ, ಕೇರಳ ಮತ್ತು ಪಂಜಾಬ್​ನಲ್ಲಿ ದೇಶದ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಶೇಕಡಾ 73.64 ರಷ್ಟು ಕೊರೊನಾ ಪ್ರಕರಣ ವರದಿಯಾಗಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ದೈನಂದಿನ ಪ್ರಕರಣಗಳಿಗೆ ಸಂಬಂಧಿಸಿದಂತೆ, ಮಹಾರಾಷ್ಟ್ರವು ಒಂದೇ ದಿನದಲ್ಲಿ ಅತಿ ಹೆಚ್ಚು ಅಂದರೆ 35,952 ಪ್ರಕರಣಗಳನ್ನು ವರದಿ ಮಾಡಿದೆ. ನಂತರದ ಸ್ಥಾನದಲ್ಲಿ ಪಂಜಾಬ್‌ನಲ್ಲಿ 2,661 ಮತ್ತು ಕರ್ನಾಟಕದಲ್ಲಿ 2,523 ಸೋಂಕುಗಳು ದಾಖಲಾಗಿವೆ. ಸಚಿವಾಲಯದ ಪ್ರಕಾರ ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ, ಛತ್ತೀಸ್‌ಗಢ, ಕೇರಳ ಮತ್ತು ಗುಜರಾತ್​ನಲ್ಲಿ ಒಟ್ಟಾರೆ ಶೇ 80 ರಷ್ಟು ಪ್ರಕರಣ ವರದಿಯಾಗಿವೆ.

ಮಹಾರಾಷ್ಟ್ರ, ಗುಜರಾತ್, ಪಂಜಾಬ್, ಮಧ್ಯಪ್ರದೇಶ, ದೆಹಲಿ, ತಮಿಳುನಾಡು, ಛತ್ತೀಸ್‌ಗಢ, ಕರ್ನಾಟಕ, ಹರಿಯಾಣ ಮತ್ತು ರಾಜಸ್ಥಾನಗಳಲ್ಲಿ ದೈನಂದಿನ ಹೊಸ ಪ್ರಕರಣಗಳು ಮೇಲ್ಮುಖವಾಗಿ ಹೋಗುತ್ತಿವೆ. ಭಾರತದಲ್ಲಿ ಒಟ್ಟಾರೆ ಚೇತರಿಕೆ 1,12,64,637 ರಷ್ಟಿದ್ದು, ಒಂದು ದಿನದಲ್ಲಿ 32,987 ಜನರು ಚೇತರಿಸಿಕೊಂಡಿದ್ದಾರೆ. ಹಾಗೆ ಒಂದು ದಿನದಲ್ಲಿ 257 ಸಾವುಗಳು ವರದಿಯಾಗಿವೆ. ಆರು ರಾಜ್ಯಗಳಲ್ಲಿ ಶೇಕಡಾ 78.6 ರಷ್ಟು ಸಾವು ಸಂಭವಿಸುತ್ತಿದ್ದು, ಮಹಾರಾಷ್ಟ್ರದಲ್ಲಿ 111 ಸಾವು ಹಾಗೂ ಪಂಜಾಬ್​ನಲ್ಲಿ 43 ಜನರು ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಇನ್ನುಳಿದಂತೆ ಹದಿನಾಲ್ಕು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಇಂದು ಕೊರೊನಾದಿಂದಾದ ಸಾವುಗಳನ್ನು ವರದಿ ಮಾಡಿಲ್ಲ. ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಒಡಿಶಾ, ಪುದುಚೇರಿ, ಲಕ್ಷದ್ವೀಪ, ಸಿಕ್ಕಿಂ, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ಡಿಯು, ಲಡಾಖ್, ಮಣಿಪುರ, ತ್ರಿಪುರ, ಮಿಜೋರಾಂ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಅರುಣಾಚಲ ಪ್ರದೇಶದಲ್ಲಿ ಕೊರೊನಾದಿಂದ ಇಂದು ಯಾರೂ ಸಾವಿಗೀಡಾಗಿಲ್ಲ.

ಲಸಿಕೆ ಪಡೆದವರು:

ಇದರ ನಡುವೆ ತಾತ್ಕಾಲಿಕ ವರದಿಯ ಪ್ರಕಾರ ಶುಕ್ರವಾರ ಬೆಳಿಗ್ಗೆ 7 ಗಂಟೆಯವರೆಗೆ ದೇಶಾದ್ಯಂತ 9,01,887 ಸ್ಟೇಷನ್‌ಗಳ ಮೂಲಕ 5.5 ಕೋಟಿ ಲಸಿಕೆ ನೀಡಲಾಗಿದೆ. ವ್ಯಾಕ್ಸಿನೇಷನ್ ಡ್ರೈವ್‌ನ 69 ನೇ ದಿನವಾದ ಮಾರ್ಚ್ 25 ರಂದು 23 ಲಕ್ಷಕ್ಕೂ ಹೆಚ್ಚು ಲಸಿಕೆ ನೀಡಲಾಗಿದೆ. ಹಾಗೆ ಹತ್ತು ರಾಜ್ಯಗಳಾದ- ಕೇರಳ, ಮಧ್ಯಪ್ರದೇಶ, ಕರ್ನಾಟಕ, ಪಶ್ಚಿಮ ಬಂಗಾಳ, ಗುಜರಾತ್, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿ ಒಂದು ದಿನದಲ್ಲಿ ನೀಡಲಾದ ಲಸಿಕೆ ಪ್ರಮಾಣ ಶೇಕಡಾ 70 ರಷ್ಟಿದೆ.

Last Updated : Mar 26, 2021, 8:26 PM IST

ABOUT THE AUTHOR

...view details