ಮುಂಬೈ:ಶಿವಸೇನೆ ನಾಯಕತ್ವದ ವಿರುದ್ಧವೇ ಬಂಡಾಯ ಎದ್ದಿರುವ ರೆಬೆಲ್ ನಾಯಕ ಏಕನಾಥ್ ಶಿಂದೆ ಬಣದ ವಿರುದ್ಧ ಶಿವಸೈನಿಕರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿಂದೆ ಮತ್ತು ಸಿಎಂ ಠಾಕ್ರೆ ನಡುವೆ ಜಟಾಪಟಿ ಸಂಘರ್ಷಕ್ಕೆ ಕಾರಣವಾಗಿದೆ. ಶಿವಸೈನಿಕರು ಶಾಸಕರ ಕಚೇರಿಗಳಿಗೆ ತೆರಳಿ ದಾಂಧಲೆ ಸೃಷ್ಟಿ ಮಾಡುತ್ತಿದ್ದಾರೆ. ಹೀಗಾಗಿ ಮುಂಬೈ ಪೊಲೀಸರು ಥಾಣೆ ಮತ್ತು ಮುಂಬೈನಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.
ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಂಘರ್ಷ ಮತ್ತು ಗಲಭೆ ಉಂಟಾಗುತ್ತಿರುವುದರಿಂದ ಜುಲೈ 10 ರವರೆಗೆ ಮುಂಬೈ ನಗರ ಮತ್ತು ಥಾಣೆಯಲ್ಲಿ ಕರ್ಫ್ಯೂ ಹೇರಲಾಗಿದೆ. ಹಾಗಾಗಿ ಜನರು ಒಂದೆಡೆ ಸೇರಬಾರದು ಎಂದು ಪೊಲೀಸರು ಸೂಚಿಸಿದ್ದಾರೆ.