ನಾಸಿಕ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಾಸಿಕ್‌ನ ಐತಿಹಾಸಿಕ ಶ್ರೀ ಕಲಾರಾಮ ಮಂದಿರಕ್ಕೆ ತೆರಳಿದ ಪ್ರಧಾನಿ ಮೋದಿ ಅವರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು. ಅಲ್ಲಿ ಅವರು ಬಕೆಟ್ ನೀರನ್ನು ತೆಗೆದುಕೊಂಡು ಮಾಪ್ ಹಿಡಿದುಕೊಂಡು ದೇವಾಲಯದ ಮಹಡಿಗಳನ್ನು ಸ್ವಚ್ಛಗೊಳಿಸಿದರು. ಜೊತೆಗೆ ಮೋದಿ ಅವರು ಎಐನಿಂದ ಅನುವಾದವಾಗಿರುವ 'ರಾಮಾಯಣ'ದ ಮಹಾಕಾವ್ಯ ಪಠಣ ಹಿಂದಿ ಆವೃತ್ತಿಯನ್ನು ಆಲಿಸಿದರು.
ಇಂದು (ಶುಕ್ರವಾರ) ಮಹಾರಾಷ್ಟ್ರ ಪ್ರವಾಸದ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರು, ನಾಸಿಕ್‌ನ ಶ್ರೀ ಕಲಾರಾಮ ಮಂದಿರದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ನಡೆದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಭಜನೆ ಮತ್ತು ಸಿಂಬಲ್ ನುಡಿಸಿದರು, ಜೊತೆಗೆ ದೇವಾಲಯದ ನೆಲವನ್ನು ಒರೆಸಿದರು.
ಪ್ರಧಾನಿ ಮೋದಿ ಅವರು ಸಂಗೀತ ವಾದ್ಯ ಸಿಂಬಲ್ಸ್ ಅನ್ನು ನುಡಿಸಿದರು. ಜೊತೆಗೆ ಭಕ್ತರು ಮತ್ತು ಕಲಾವಿದರಿಂದ ನಡೆದ ರಾಮ ಭಜನೆ ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಿದ್ದರು. ಇದರಿಂದೊಂದಿಗೆ ಮೋದಿ ವಿವಿಧ ಪೂಜೆ, ಸಮಾರಂಭಗಳಲ್ಲಿ ಪಾಲ್ಗೊಂಡರು. ಎಐ ಅನುವಾದದ ಹಿಂದಿ ಆವೃತ್ತಿಯ 'ರಾಮಾಯಣ' ಮಹಾಕಾವ್ಯದ ಪಠಣವನ್ನು ಆಲಿಸಿದರು. ಭಗವಾನ್ ರಾಮನು ಅಯೋಧ್ಯೆಗೆ ಹಿಂದಿರುಗುವುದನ್ನು ಚಿತ್ರಿಸುವ ಮಹಾಕಾವ್ಯದ 'ಯುದ್ಧ ಕಾಂಡ' ವಿಭಾಗವನ್ನು ಈ ಸಂದರ್ಭದಲ್ಲಿ ಪಠಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಕ್ತರು ಮತ್ತು ನಾಗರಿಕರು ಮುಂದೆ ಬಂದು ದೇಶಾದ್ಯಂತ ಎಲ್ಲ ದೇವಾಲಯಗಳಲ್ಲಿ ಇದೇ ರೀತಿಯ ಸ್ವಚ್ಛತಾ ಅಭಿಯಾನಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದರು. ದೇವಾಲಯದ ಭೇಟಿಯ ವೇಳೆ ಪ್ರಧಾನಿಯವರೊಂದಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ ಇದ್ದರು.
ನಾಸಿಕ್‌ನಲ್ಲಿರುವ ಸ್ವಾಮಿ ವಿವೇಕಾನಂದರ ಜನ್ಮದಿನದಂದು ಅವರ ಪ್ರತಿಮೆಗೆ ಪ್ರಧಾನಿ ಮೋದಿ ಮಾಲಾರ್ಪಣೆ ಮಾಡಿದರು. ರಾಮಾಯಣಕ್ಕೆ ಸಂಬಂಧಿಸಿದ ಸ್ಥಳಗಳಲ್ಲಿ, ಪಂಚವಟಿಗೆ ವಿಶೇಷ ಸ್ಥಾನವಿದೆ, ಏಕೆಂದರೆ ರಾಮಾಯಣದ ಹಲವಾರು ಪ್ರಮುಖ ಘಟನೆಗಳು ಇಲ್ಲಿ ನಡೆದಿವೆ. ಶ್ರೀ ಕಲಾರಾಮ ಮಂದಿರವು ನಾಸಿಕ್‌ನ ಗೋದಾವರಿ ನದಿಯ ದಡದಲ್ಲಿದೆ.
ರಾಷ್ಟ್ರೀಯ ಯುವ ಉತ್ಸವ ಉದ್ಘಾಟನೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ನಾಸಿಕ್‌ನಲ್ಲಿ 27ನೇ ರಾಷ್ಟ್ರೀಯ ಯುವ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಚಂದ್ರಯಾನ -3 ಮತ್ತು ಆದಿತ್ಯ ಎಲ್ -1 ರ ಯಶಸ್ಸನ್ನು ಶ್ಲಾಘಿಸಿದರು.