ಮುಂಬೈ(ಮಹಾರಾಷ್ಟ್ರ):ಪಂಚರಾಜ್ಯ ಚುನಾವಣೆಗಳಲ್ಲಿ ಗೆಲ್ಲಲು ವಿವಿಧ ಪಕ್ಷಗಳು ಕಸರತ್ತುಗಳನ್ನು ನಡೆಸುತ್ತಿರುವ ಈ ವೇಳೆಯಲ್ಲೇ ಮಹಾರಾಷ್ಟ್ರದಲ್ಲಿ ನಡೆದ ನಗರ ಪಂಚಾಯತ್ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಈ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಪಂಚಾಯತ್ಗಳಲ್ಲಿ ಪಾರಮ್ಯ ಮೆರೆದಿದೆ.
ಮಹಾರಾಷ್ಟ್ರದ ಒಟ್ಟು 106 ನಗರ ಪಂಚಾಯತ್‌ಗಳಿಗೆ ಚುನಾವಣೆ ನಡೆದಿದ್ದು, ಒಟ್ಟು 97 ನಗರ ಪಂಚಾಯತ್‌ಗಳ ಫಲಿತಾಂಶ ಬಹಿರಂಗವಾಗಿದೆ. ಬಿಜೆಪಿ 18, ಎನ್‌ಸಿಪಿ 12, ಕಾಂಗ್ರೆಸ್ 12 ಮತ್ತು ಶಿವಸೇನೆ 8 ಪಂಚಾಯತ್ಗಳಲ್ಲಿ ಗೆಲುವು ಸಾಧಿಸಿದೆ. ಇದರ ಜೊತೆಗೆ ಸ್ಥಳೀಯ ಮೋರ್ಚಾಗಳು 46 ಪಂಚಾಯತ್ಗಳಲ್ಲಿ ಪಾರಮ್ಯ ಮೆರೆದಿದ್ದಾರೆ.