ಮುಂಬೈ:ಉದ್ದವ್ ಠಾಕ್ರೆ ಒಬ್ಬ ಸಂವೇದನಾಶೀಲ ಹಾಗೂ ಸುಸಂಸ್ಕೃತ ಮುಖ್ಯಮಂತ್ರಿಯನ್ನು ಕಳೆದುಕೊಂಡಿದೆ ಎಂದು ಶಿವಸೇನಾ ಸಂಸದ ಸಂಜಯ್ ರಾವುತ್ ಬೇಸರ ವ್ಯಕ್ತಪಡಿಸಿದ್ದಾರೆ. ಸಂಖ್ಯೆಗಳ ಆಟ ಆಡಲ ತಮಗೆ ಆಸಕ್ತಿಯಿಲ್ಲ ಎಂದು ಹೇಳಿದ ಠಾಕ್ರೆ ಬುಧವಾರ ರಾತ್ರಿಯೇ ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದರು.
ಈ ಹಿನ್ನೆಲೆಯಲ್ಲಿ ಸಂಜಯ್ ರಾವುತ್ ಟ್ವೀಟ್ ಮಾಡಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶಿವಸೇನೆ ಸಂಸ್ಥಾಪಕ ಬಾಳ್ ಠಾಕ್ರೆ ಅವರ ಪರಂಪರೆಯನ್ನು ಮುಂದೆ ತೆಗೆದುಕೊಂಡು ಹೋಗುತ್ತೇವೆ ಮತ್ತು ಇದಕ್ಕಾಗಿ ಜೈಲಿಗೆ ಹೋಗಲು ಸಿದ್ಧ ಎಂದು ಅವರು ಹೇಳಿದರು. ವಿಶ್ವಾಸಘಾತುಕರಿಗೆ ಎಂದಿಗೂ ಒಳ್ಳೆಯದಾಗುವುದಿಲ್ಲ ಮತ್ತು ಅದನ್ನು ಇತಿಹಾಸವು ಇದನ್ನು ಸಾಬೀತುಪಡಿಸುತ್ತದೆ ಎಂದಿರುವ ಸಂಜಯ ರಾವುತ್, ಶಿವಸೇನೆಯ ಬೃಹತ್ ಗೆಲುವಿನ ಆರಂಭವಾಗಿದೆ ಎಂದಿದ್ದಾರೆ.
ನಾವು ಲಾಠಿ ಎದುರಿಸುತ್ತೇವೆ, ಜೈಲಿಗೆ ಹೋಗುತ್ತೇವೆ ಎಂದು ಬಂಡಾಯಗಾರರಿಗೆ ಮತ್ತು ಬಿಜೆಪಿಗೆ ಟಾಂಗ್ ನೀಡಿದ್ದಾರೆ. ಅಷ್ಟೇ ಅಲ್ಲ ಬಾಳಾಸಾಹೇಬ್ ಠಾಕ್ರೆ ಅವರ ಶಿವಸೇನೆಯನ್ನು ಜೀವಂತವಾಗಿಡುತ್ತೇವೆ ಎಂದೂ ಸಂಜಯ್ ರಾವತ್ ಇದೇ ವೇಳೆ ಘೋಷಿಸಿದ್ದಾರೆ.