ಮುಂಬೈ(ಮಹಾರಾಷ್ಟ್ರ):ಅಮರಾವತಿ ಸಂಸದೆ ನವನೀತ್ ರಾಣಾ ಬೀದಿ ಬದಿಯೊಂದರ ಫುಡ್ ಸ್ಟಾಲ್ನಲ್ಲಿ ದೋಸೆ ಮಾಡಿ ಗಮನ ಸೆಳೆದಿದ್ದಾರೆ. ಗಾಡ್ಗೆ ನಗರದಲ್ಲಿ ನವನೀತ್ ರಾಣಾ ದೋಸೆ ಮಾಡಿದ್ದು,ಹೋಟೆಲ್ನವರೊಂದಿಗೆ ಸ್ವಲ್ಪ ಹೊತ್ತು ಮಾತುಕತೆಯಾಡಿದ್ದಾರೆ.
ಶೆಗಾಂವ್ ನಗರದ ರಸ್ತೆ ಕಾಮಗಾರಿ ಪರಿಶೀಲನೆಗೆ ತೆರಳಿದ್ದ ವೇಳೆ ನವನೀತ್ ರಾಣಾ ಹೋಟೆಲ್ಗೆ ಭೇಟಿ ನೀಡಿದ್ದಾರೆ. ಇದೇ ವೇಳೆ ಟೀ ಅಂಗಡಿ ಮತ್ತು ತರಕಾರಿ ಮಾರುವ ಬೀದಿ ಬದಿ ವ್ಯಾಪಾರಿಗಳೊಂದಿಗೆ ಸಂವಾದ ನಡೆಸಿದ್ದಾರೆ.