ಕರ್ನಾಟಕ

karnataka

ETV Bharat / bharat

ಶಿವಾಜಿ ಬಗ್ಗೆ ಹೇಳಿಕೆ.. ಮಹಾರಾಷ್ಟ್ರ ರಾಜ್ಯಪಾಲರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ - ಸ್ವರಾಜ್ಯ ಸಂಘಟನೆ

ಮಹಾರಾಷ್ಟ್ರದ ಪುಣೆಯಲ್ಲಿ ರಾಜ್ಯಪಾಲ ಭಗತ್‌ ಸಿಂಗ್​ ಕೋಶ್ಯಾರಿ ವಿರುದ್ಧ ಸ್ವರಾಜ್ಯ ಸಂಘಟನೆಯ ಮುಖಂಡರು ಪ್ರತಿಭಟನೆ ನಡೆಸಿದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

maharashtra-governor-koshiyari-shown-black-flags-in-pune
ಶಿವಾಜಿ ಬಗ್ಗೆ ಹೇಳಿಕೆ... ಮಹಾರಾಷ್ಟ್ರ ರಾಜ್ಯಪಾಲರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ

By

Published : Dec 2, 2022, 3:19 PM IST

ಪುಣೆ (ಮಹಾರಾಷ್ಟ್ರ):ಛತ್ರಪತಿ ಶಿವಾಜಿ ಮಹಾರಾಜ್​ ಕುರಿತ ಹೇಳಿಕೆಯನ್ನು ಖಂಡಿಸಿ ಮಹಾರಾಷ್ಟ್ರ ರಾಜ್ಯಪಾಲ ಭಗತ್‌ ಸಿಂಗ್​ ಕೋಶ್ಯಾರಿ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿದ ಘಟನೆ ಪುಣೆಯಲ್ಲಿ ನಡೆದಿದ್ದು, ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇತ್ತೀಚೆಗೆ ರಾಜ್ಯಪಾಲ ಭಗತ್‌ ಸಿಂಗ್​ ಕೋಶ್ಯಾರಿ ಅವರು ಶಿವಾಜಿ ಮಹಾರಾಜ್ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು. ಇದನ್ನು ಖಂಡಿಸಿ ಸ್ವರಾಜ್ಯ ಸಂಘಟನೆಯ ಮುಖಂಡರು ಇಂದು ಪುಣೆಗೆ ಆಗಮಿಸಿದ್ದ ರಾಜ್ಯಪಾಲರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಅಲ್ಲದೇ, ರಾಜ್ಯಪಾಲರು ಭಾಗವಹಿಸಲು ಆಗಮಿಸಿದ್ದ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಕಾರ್ಯಕರ್ತರು ಯತ್ನಿಸಿದರು.

ಆದರೆ, ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದ ಪೊಲೀಸರು ಪ್ರತಿಭಟನಾ ನಿರತರನ್ನು ತಮ್ಮ ವಶಕ್ಕೆ ಪಡೆದರು. ಈ ವೇಳೆ, ಪ್ರತಿಭಟನಾಕಾರರು ರಾಜ್ಯಪಾಲರನ್ನು ತೆಗೆದುಹಾಕಿ, ಮಹಾರಾಷ್ಟ್ರ ಅಸ್ಮಿತೆ ಉಳಿಸಿ, ಛತ್ರಪತಿ ಶಿವಾಜಿ ಮಹಾರಾಜ್ ಕೀ ಜೈ ಎಂಬ ಘೋಷಣೆಗಳನ್ನು ಕೂಗಿದರು.

ಇದನ್ನೂ ಓದಿ:ಪ್ರಜಾಪ್ರಭುತ್ವದ ಬಗ್ಗೆ ನಮಗೆ ಯಾರೂ ಕಲಿಸಿಕೊಬೇಕಿಲ್ಲ: ವಿಶ್ವಕ್ಕೆ ಭಾರತದ ಸಂದೇಶ

ABOUT THE AUTHOR

...view details