ಮುಂಬೈ (ಮಹಾರಾಷ್ಟ್ರ):ಕೋವಿಡ್ ನಿಯಂತ್ರಿಸಲು ರಾಜ್ಯದಲ್ಲಿ ಹೇರಲಾಗಿರುವ ಲಾಕ್ಡೌನ್ನನ್ನು ಮತ್ತೆ 15 ದಿನಗಳ ವರೆಗೆ ವಿಸ್ತರಿಸಿ (Lockdown extension) ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ.
ಜೂನ್ 15 ರವರೆಗೆ ಲಾಕ್ಡೌನ್(Lockdown) ಜಾರಿಯಲ್ಲಿರುತ್ತದೆ. ಆದರೆ ಜಿಲ್ಲೆಗಳಲ್ಲಿನ ಕೋವಿಡ್ ಪಾಸಿಟಿವಿಟಿ ದರ ಹಾಗೂ ಆಮ್ಲಜನಕ ಹಾಸಿಗೆಗಳನ್ನು ಆಧರಿಸಿ ವಿನಾಯಿತಿ ನೀಡಲಾಗುವುದು ಎಂದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಕೊರೊನಾ ಪಾಸಿಟಿವಿಟಿ ರೇಟ್ ಶೇ.10ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಹಾಗೂ ಆಕ್ಸಿಜನ್ ಬೆಡ್ ಲಭ್ಯತೆಯು ಶೇ. 40 ಕ್ಕಿಂತ ಕಡಿಮೆಯಿದ್ದರೆ, ಅಂತಹ ಜಿಲ್ಲೆಗಳಿಗೆ ನಿರ್ಬಂಧಗಳನ್ನು ಸಡಿಲಗೊಳಿಸಲಾಗುತ್ತದೆ. ಈ ಜಿಲ್ಲೆಗಳಲ್ಲಿ ಅಗತ್ಯ ಸರಕುಗಳು ಮತ್ತು ಸೇವೆಗಳಲ್ಲಿ ತೊಡಗಿರುವ ಎಲ್ಲಾ ಅಂಗಡಿಗಳು - ಸಂಸ್ಥೆಗಳು ಬೆಳಗ್ಗೆ 7 ರಿಂದ ಮಧ್ಯಾಹ್ನ 2 ರವರೆಗೆ ತೆರೆಯಬಹುದು ಎಂದು ಹೊಸ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಪ್ರಸ್ತುತ ಬೆಳಗ್ಗೆ 7 ರಿಂದ 11 ರವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡಲಾಗಿತ್ತು.