ಕರ್ನಾಟಕ

karnataka

ETV Bharat / bharat

ವಿಮಾನ ನಿಲ್ದಾಣದಲ್ಲಿ ವಿದೇಶಿಯ 2 ಹಾವು, 9 ಹೆಬ್ಬಾವುಗಳ ಪತ್ತೆ, ಬೆಚ್ಚಿಬಿದ್ದ ಅಧಿಕಾರಿಗಳು - ನಿಯಮಿತವಾಗಿ ಶೋಧ ಕಾರ್ಯಾಚರಣೆ

ಮುಂಬೈ ವಿಮಾನ ನಿಲ್ದಾಣದಲ್ಲಿ ವಿದೇಶಿ ಹಾವು ಮತ್ತು ಹೆಬ್ಬಾವುಗಳ ಕಳ್ಳಸಾಗಣೆ ಬಗ್ಗೆ ಬೆಳಕಿಗೆ ಬಂದಿದ್ದು, ಇದನ್ನು ಕಂಡ ಅಧಿಕಾರಿಗಳು ಒಂದು ಕ್ಷಣ ಹೌಹಾರಿದ್ದಾರೆ.

DRI seizes 9 pythons  corn snakes  passenger luggage  Mumbai airport  Chhatrapati Shivaji Maharaj International Airport  ವಿಮಾನ ನಿಲ್ದಾಣದಲ್ಲಿ ವಿದೇಶಿ 2 ಹಾವು  9 ಹೆಬ್ಬಾವುಗಳ ಪತ್ತೆ  ಮುಂಬೈ ವಿಮಾನ ನಿಲ್ದಾಣ  ಹಾವು ಮತ್ತು ಹೆಬ್ಬಾವುಗಳ ಕಳ್ಳಸಾಗಣೆ  ಹೆಬ್ಬಾವುಗಳ ಕಳ್ಳಸಾಗಣೆ ಪ್ರಕರಣ  ಕಂದಾಯ ಗುಪ್ತಚರ ನಿರ್ದೇಶನಾಲಯ  ನಿಯಮಿತವಾಗಿ ಶೋಧ ಕಾರ್ಯಾಚರಣೆ  ಬ್ಯಾಂಕಾಕ್​ನಿಂದ ಬಂದಿದ್ದ ವ್ಯಕ್ತಿ
9 ಹೆಬ್ಬಾವುಗಳ ಪತ್ತೆ, ಬೆಚ್ಚಿಬಿದ್ದ ಅಧಿಕಾರಿಗಳು

By ANI

Published : Dec 23, 2023, 8:37 AM IST

ಮುಂಬೈ, ಮಹಾರಾಷ್ಟ್ರ: ವಿದೇಶಿ ಹಾವುಗಳು ಮತ್ತು ಹೆಬ್ಬಾವುಗಳ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬನನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ತಂಡವು ಬಂಧಿಸಿದೆ. ಆತನಿಂದ ಒಂಬತ್ತು ಹೆಬ್ಬಾವು ಮತ್ತು ಎರಡು ಹಾವುಗಳನ್ನು ಡಿಆರ್‌ಐ ತಂಡ ವಶಪಡಿಸಿಕೊಂಡಿದೆ. ಇದಾದ ಬಳಿಕ ಈ ಹಾವು ಮತ್ತು ಹೆಬ್ಬಾವುಗಳನ್ನು ವಿದೇಶಕ್ಕೆ ಕಳುಹಿಸಲು ಡಿಆರ್‌ಐ ವ್ಯವಸ್ಥೆ ಮಾಡಿದೆ.

ಡಿಆರ್‌ಐ ಮೂಲಗಳ ಪ್ರಕಾರ, ಅವರ ತಂಡ ಮುಂಬೈ ವಿಮಾನ ನಿಲ್ದಾಣದಲ್ಲಿ ನಿಯಮಿತವಾಗಿ ಶೋಧ ಕಾರ್ಯಾಚರಣೆ ಕೈಗೊಂಡಿತ್ತು. ಇದೇ ವೇಳೆ ಬ್ಯಾಂಕಾಕ್​ನಿಂದ ಬಂದಿದ್ದ ವ್ಯಕ್ತಿಯೊಬ್ಬರು ಅನುಮಾನಾಸ್ಪದ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಆತನನ್ನು ಪರಿಶೀಲನೆಗೆ ಒಳಪಡಿಸಿದಾಗ ಒಂಬತ್ತು ಹೆಬ್ಬಾವುಗಳು (ಪೈಥಾನ್ ರೆಜಿಯಸ್) ಮತ್ತು ಎರಡು ಹಾವುಗಳು (ಪ್ಯಾಂಥೆರೊಫಿಸ್ ಗುಟ್ಟಾಟಸ್) ಆತನ ಬ್ಯಾಗ್​ನಲ್ಲಿ ಕಂಡುಬಂದಿವೆ. ಇದನ್ನು ಕಸ್ಟಮ್ಸ್ ಆಕ್ಟ್, 1962 ರ ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಯಿತು. ವಶಪಡಿಸಿಕೊಂಡ ಹಾವು ಮತ್ತು ಹೆಬ್ಬಾವುಗಳ ಬಗ್ಗೆ ವನ್ಯಜೀವಿ ಅಪರಾಧ ನಿಯಂತ್ರಣ ಇಲಾಖೆ ಅಧಿಕಾರಿಗಳು ವಿಚಾರಿಸಿದಾಗ ಅವು ವಿದೇಶದಿಂದ ಬಂದಿರುವುದು ಕಂಡುಬಂದಿತು.

ಇದು ಆಮದು ನೀತಿಯ ಉಲ್ಲಂಘನೆಯಾಗಿರುವುದರಿಂದ ಹೆಬ್ಬಾವು ಮತ್ತು ಹಾವನ್ನು ಬ್ಯಾಂಕಾಕ್‌ಗೆ ವಾಪಸ್ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ, ಚೇತರಿಸಿಕೊಂಡ ಹಾವುಗಳು ಮತ್ತು ಹೆಬ್ಬಾವುಗಳನ್ನು ವಿಮಾನಯಾನ ಸಂಸ್ಥೆಗೆ ಹಸ್ತಾಂತರಿಸಲಾಗಿದ್ದು, ವಿಮಾನಯಾನ ಸಂಸ್ಥೆಯ ಸಹಾಯದಿಂದ ಬ್ಯಾಂಕಾಕ್‌ಗೆ ವಾಪಸ್ ಕಳುಹಿಸಲಾಗುವುದು. ಈ ಪ್ರಕರಣದಲ್ಲಿ ಬಂಧಿತ ವ್ಯಕ್ತಿಯನ್ನು ಕೂಲಂಕುಷವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಡಿಆರ್​ಐ ಅಧಿಕಾರಿಗಳು ತಿಳಿಸಿದ್ದಾರೆ.

ಓದಿ:ಕೆಂಪೇಗೌಡ ಟರ್ಮಿನಲ್​ 2ಗೆ​​​​ 'ವಿಶ್ವದ ಅತಿ ಸುಂದರ ವಿಮಾನ ನಿಲ್ದಾಣ' ಪ್ರಶಸ್ತಿ

ಸೂಟ್​ಕೇಸ್​ನಲ್ಲಿ ವಿಷಕಾರಿ ಹಾವುಗಳು ಪತ್ತೆ: ಈ ಹಿಂದೆ ಬ್ಯಾಂಕಾಕ್​ನಿಂದ ಬೆಂಗಳೂರಿಗೆ ಬಂದ ಪ್ರಯಾಣಿಕನ ಲಗೇಜ್​ಗಳನ್ನ ತಪಾಸಣೆ ಮಾಡಿದಾಗ ಆತನ ಸೂಟ್ ಕೇಸ್​ನಲ್ಲಿ 20 ವಿಷಕಾರಿ ಕಿಂಗ್ ಕೋಬ್ರಾಗಳು ಪತ್ತೆಯಾಗಿದ್ದವು. ಹೆಬ್ಬಾವು, ಕೋತಿಗಳು ಸೇರಿದಂತೆ ಒಟ್ಟು 78 ಪ್ರಾಣಿಗಳು ಆತನ ಲಗೇಜ್​ನಲ್ಲಿ ಕಂಡು ಬಂದಿದ್ದವು.

ಹೌದು, ಸೆಪ್ಟೆಂಬರ್​ 6 ರಂದು ಬ್ಯಾಂಕಾಕ್​ನಿಂದ ದೇವನಹಳ್ಳಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕ ಬಂದಿಳಿದ್ದಿದ್ದನು. ರಾತ್ರಿ 10:30ಕ್ಕೆ ಫ್ಲೈಟ್ ನಂ. ಎಫ್‌ಡಿ 137 ಏರ್ ಏಷ್ಯಾ ವಿಮಾನದಲ್ಲಿ ಬಂದ ಪ್ರಯಾಣಿಕನ ಲಗೇಜ್​ಗಳನ್ನ ಪರಿಶೀಲನೆ ಮಾಡಿದಾಗ ಸೂಟ್ ಕೇಸ್​ನಲ್ಲಿ 17 ಜೀವಂತ ಕಿಂಗ್ ಕೋಬ್ರಾಗಳು ಪತ್ತೆಯಾಗಿದ್ದವು. ಜೊತೆಗೆ 55 ಬಾಲ್ ಹೆಬ್ಬಾವುಗಳು ಸಹ ಕಂಡು ಬಂದಿದ್ದವು. ಆದ್ರೆ ಆ ಸಮಯದಲ್ಲಿ 6 ಕಪುಚಿನ್ ಮಂಗಗಳು ಸತ್ತಿರುವುದು ಬೆಳಕಿಗೆ ಬಂದಿತ್ತು. ಒಟ್ಟು 78 ಪ್ರಾಣಿಗಳನ್ನ ಪ್ರಯಾಣಿಕ ಅಕ್ರಮವಾಗಿ ಬ್ಯಾಂಕಾಕ್​ನಿಂದ ಬೆಂಗಳೂರಿಗೆ ಸಾಗಿಸುವ ಯತ್ನದಲ್ಲಿ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದನು. ಆರೋಪಿಯ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯಿದೆ, 1972 ರ ಅಡಿ ಪ್ರಕರಣ ದಾಖಲು ಮಾಡಲಾಗಿ ತನಿಖೆ ಕೈಗೊಂಡಿದ್ದರು.

ABOUT THE AUTHOR

...view details