ಕರ್ನಾಟಕ

karnataka

ETV Bharat / bharat

ಡೆಲ್ಟಾ ಪ್ಲಸ್​​​​ ಅಪಾಯ.. 66 ಮಂದಿಗೆ ಸೋಂಕು, ಐವರು ಬಲಿ.. - ಇಂಡಿಯಾ ಕೊರೊನಾ

ಹೀಗೆ ಕೋವಿಡ್ ಕೇಸ್​​ಗಳು ಹೆಚ್ಚಾದರೆ ರಾಜ್ಯದಲ್ಲಿ ಮತ್ತೆ ಲಾಕ್​​ಡೌನ್​ ಹೇರುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಜೊತೆಗೆ ಸಿಎಂ ಉದ್ಧವ್ ಠಾಕ್ರೆ ಸಹ ಲಾಕ್‌ಡೌನ್​ ಸುಳಿವು ನೀಡಿದ್ದಾರೆ. ಸೋಂಕು ಕಡಿಮೆಯಾಗದಿದ್ದರೆ ಲಾಕ್​​​ಡೌನ್ ಹೇರಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ..

delta-plus
ಡೆಲ್ಟಾ ಅಪಾಯ

By

Published : Aug 14, 2021, 3:35 PM IST

ಹೈದರಾಬಾದ್ :ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದೆ. ಡೆಲ್ಟಾ ಪ್ಲಸ್​​​ ರೂಪಾಂತರಿ ಪ್ರಕರಣಗಳ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ. ಸದ್ಯ ಮಹಾರಾಷ್ಟ್ರದಲ್ಲಿ 66 ಮಂದಿಗೆ ಡೆಲ್ಟಾ ಪ್ಲಸ್​​​ ವೈರಸ್ ದೃಢವಾಗಿದ್ದು, ಸೋಂಕಿಗೆ ಐವರು ಮೃತಪಟ್ಟಿದ್ದಾರೆ.

ಇವರಲ್ಲಿ ರತ್ನಗಿರಿ ಜಿಲ್ಲೆಯ ಇಬ್ಬರು, ಮುಂಬೈ, ಬೀಡ್ ಹಾಗೂ ರಾಯ್ಗಡದ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ 65 ವರ್ಷ ಮೇಲ್ಪಟ್ಟವರಾಗಿದ್ದಾರೆ. ವಯೋಸಹಜ ಕಾಯಿಲೆಯೂ ಅವರಲ್ಲಿ ಕಂಡು ಬಂದಿತ್ತು ಎನ್ನಲಾಗಿದೆ.

ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ಮೃತಪಟ್ಟವರಲ್ಲಿ ಇಬ್ಬರು ಎರಡು ಡೋಸ್ ಲಸಿಕೆ ಪಡೆದವರಾಗಿದ್ದಾರೆ. ಇನ್ನಿಬ್ಬರು ಮೊದಲ ಡೋಸ್ ಅಷ್ಟೇ ಪಡೆದಿದ್ದರು, ಇನ್ನೊಬ್ಬರ ಮಾಹಿತಿ ಲಭ್ಯವಾಗಿಲ್ಲ.

ಹೀಗೆ ಕೋವಿಡ್ ಕೇಸ್​​ಗಳು ಹೆಚ್ಚಾದರೆ ರಾಜ್ಯದಲ್ಲಿ ಮತ್ತೆ ಲಾಕ್​​ಡೌನ್​ ಹೇರುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಜೊತೆಗೆ ಸಿಎಂ ಉದ್ಧವ್ ಠಾಕ್ರೆ ಸಹ ಲಾಕ್‌ಡೌನ್​ ಸುಳಿವು ನೀಡಿದ್ದಾರೆ. ಸೋಂಕು ಕಡಿಮೆಯಾಗದಿದ್ದರೆ ಲಾಕ್​​​ಡೌನ್ ಹೇರಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ.

ಓದಿ:24 ಗಂಟೆಗಳಲ್ಲಿ ದೇಶದಲ್ಲಿ 38,667 ಸೋಂಕಿತರು ಪತ್ತೆ.. ದೆಹಲಿಯಲ್ಲಿ 'ಶೂನ್ಯ' ಸಾವು

ABOUT THE AUTHOR

...view details