ಮಲಪ್ಪುರಂ(ಕೇರಳ):1 ಕೋಟಿ ರೂಪಾಯಿಗೂ ಅಧಿಕ ನಗದು ಹಾಗೂ ಅಪಾರ ಪ್ರಮಾಣದ ಚಿನ್ನಾಭರಣದೊಂದಿಗೆ ಮಹಾರಾಷ್ಟ್ರ ಮೂಲದ ದಂಪತಿ ಕೇರಳದಲ್ಲಿ ಸಿಕ್ಕಿಬಿದ್ದಿದ್ದಾರೆ. ಬೆಲೆ ಬಾಳುವ ವಸ್ತುಗಳಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆ ನೀಡದ ಕಾರಣ, ಅವುಗಳನ್ನ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಯಮತ್ತೂರಿನ ಮಲಪ್ಪುರಂನ ವೆಂಗರಾಕ್ಕೆ ಇದನ್ನ ಸಾಗಣೆ ಮಾಡಲಾಗ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಂಪತಿ ಕಾರು ಅಡ್ಡಗಟ್ಟಿ ತಪಾಸಣೆ ನಡೆಸಿದ್ದಾರೆ. ಈ ವೇಳೆ, ಕಾರಿನ ಸೀಟ್ನ ಕೆಳಗೆ ನಿರ್ಮಿಸಲಾಗಿದ್ದ ರಹಸ್ಯ ಜಾಗದಲ್ಲಿ ನಗದು ಹಾಗೂ ಚಿನ್ನಾಭರಣ ಪತ್ತೆಯಾಗಿದೆ. 500, 200 ಮತ್ತು 100 ರೂ ಮುಖಬೆಲೆಯ ಕರೆನ್ಸಿ ಪೊಲೀಸರಿಗೆ ಸಿಕ್ಕಿದೆ.