ಕರ್ನಾಟಕ

karnataka

ETV Bharat / bharat

ಕಠಿಣ ಲಾಕ್​ಡೌನ್​ ಬಿಟ್ಟು ಬೇರೆ ಆಯ್ಕೆ ಉಳಿದಿಲ್ಲ: ಸರ್ವಪಕ್ಷ ಸಭೆಯಲ್ಲಿ ಸಿಎಂ ಉದ್ಧವ್​ ಠಾಕ್ರೆ ಅಭಿಮತ

2ನೇ ಹಂತದ ಕೋವಿಡ್​ ಅಲೆ ಮಹಾರಾಷ್ಟ್ರದಲ್ಲಿ ಜೋರಾಗಿರುವ ಕಾರಣ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಸರ್ವಪಕ್ಷ ಸಭೆ ನಡೆಸಿದರು.

CM Uddhav Thackeray
CM Uddhav Thackeray

By

Published : Apr 10, 2021, 10:41 PM IST

ಮುಂಬೈ:ಕಳೆದ ಕೆಲ ವಾರಗಳಿಂದ ಮಹಾರಾಷ್ಟ್ರದಲ್ಲಿ ಎರಡನೇ ಹಂತದ ಕೋವಿಡ್ ಅಲೆ ಜೋರಾಗಿದ್ದು, ಪ್ರತಿದಿನ 50 ಸಾವಿರಕ್ಕೂ ಅಧಿಕ ಕೋವಿಡ್​ ಸೋಂಕಿತ ಪ್ರಕರಣ ದಾಖಲಾಗುತ್ತಿವೆ. ಹೀಗಾಗಿ ಇಂದು ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಸರ್ವಪಕ್ಷ ಸಭೆ ಕರೆದಿದ್ದರು.

ಸಭೆಯಲ್ಲಿ ಮಾತನಾಡಿರುವ ಉದ್ಧವ್​ ಠಾಕ್ರೆ ಮಹಾಮಾರಿ ನಿಯಂತ್ರಣಕ್ಕೆ ಕಠಿಣ ಲಾಕ್​ಡೌನ್​ ಒಂದೇ ಪರಿಹಾರ ಎಂದು ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ವಿಡಿಯೋ ಕಾನ್ಫರೆನ್ಸ್​ ಮೂಲಕ ಸಭೆ ನಡೆದಿದ್ದು, ರಾಜ್ಯದಲ್ಲಿ ಪ್ರತಿದಿನ ಹೆಚ್ಚಿನ ಕೋವಿಡ್ ಪ್ರಕರಣ ದಾಖಲಾಗುತ್ತಿರುವ ಕಾರಣ ಮತ್ತಷ್ಟು ಆತಂಕ ಸೃಷ್ಠಿಯಾಗಿದೆ ಎಂದು ಅಭಿಪ್ರಾಯ ಹೊರಹಾಕಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಲಾಕ್​ಡೌನ್​ ಬಿಟ್ಟು ನಮ್ಮ ಮುಂದೆ ಬೇರೆ ಆಯ್ಕೆ ಉಳಿದಿಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಬಂಗಾಳದ ಕೂಚ್​ ಬಿಹಾರ ಹಿಂಸಾಚಾರ... ಮುಂದಿನ 3 ದಿನ ರ‍್ಯಾಲಿ ನಡೆಸದಂತೆ ನಿರ್ಬಂಧ!

ನಾಳೆ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಕಾರ್ಯಪಡೆಗಳೊಂದಿಗೆ ಸಭೆ ನಡೆಸಲಿದ್ದು, ಇದಾದ ಬಳಿಕ ಲಾಕ್​ಡೌನ್​ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಆದರೆ ಇದಕ್ಕೆ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವಿಂದ್ರ ಫಡ್ನವಿಸ್ ವಿರೋಧ ವ್ಯಕ್ತಪಡಿಸಿದ್ದು, ಲಾಕ್​ಡೌನ್​ ಹೇರಿಕೆ ಮಾಡಿದ್ರೆ ಜನರು ಗರಂ ಆಗಲಿದ್ದು, ವಾಣಿಜ್ಯ ವಹಿವಾಟು ಸಂಪೂರ್ಣವಾಗಿ ಬಂದ್ ಆಗಲಿದೆ. ಹೀಗಂತ ಲಾಕ್​ಡೌನ್​ಗೆ ನಮ್ಮಿಂದ ಯಾವುದೇ ವಿರೋಧವಿಲ್ಲ, ಆದರೆ ಸರಿಯಾದ ಯೋಜನೆ ತೆಗೆದುಕೊಂಡು ಲಾಕ್​ಡೌನ್ ಘೋಷಣೆ ಮಾಡಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಇಂದು ಕೂಡ ದಾಖಲೆಯ 55,411 ಕೋವಿಡ್ ಪ್ರಕರಣ ದಾಖಲಾಗಿದ್ದು, 309 ಜನರು ಸಾವನ್ನಪ್ಪಿದ್ದಾರೆ. ಸದ್ಯ 5,36,682 ಸಕ್ರಿಯ ಪ್ರಕರಣಗಳಿವೆ.

ABOUT THE AUTHOR

...view details