ಕರ್ನಾಟಕ

karnataka

ETV Bharat / bharat

ಮಹಾರಾಷ್ಟ್ರದಲ್ಲಿ ಸ್ಫೋಟಗೊಂಡ ಕೊರೊನಾ: 18,466 ಹೊಸ ಕೇಸ್​​, 20 ಜನರು ಸಾವು - ಮಹಾರಾಷ್ಟ್ರ ಕೊರೊನಾ ವರದಿ

ದೇಶಾದ್ಯಂತ ಕೋವಿಡ್​ ಮೂರನೇ ಅಲೆ ಜೋರಾಗುತ್ತಿದ್ದು, ಮಹಾರಾಷ್ಟ್ರದಲ್ಲಿ ಇದರ ಅಲೆ ಮತ್ತಷ್ಟು ವೇಗ ಪಡೆದುಕೊಂಡಿದೆ.

Maharashtra Covid case
Maharashtra Covid case

By

Published : Jan 4, 2022, 10:33 PM IST

ಮುಂಬೈ(ಮಹಾರಾಷ್ಟ್ರ):ಮಹಾರಾಷ್ಟ್ರದಲ್ಲಿ ಕೊರೊನಾ ಸ್ಫೋಟಗೊಂಡಿದ್ದು, ಕಳೆದ 24 ಗಂಟೆಯಲ್ಲಿ ದಾಖಲೆಯ 18 ಸಾವಿರಕ್ಕೂ ಅಧಿಕ ಸೋಂಕಿತ ಪ್ರಕರಣ ದಾಖಲಾಗಿದ್ದು, 20 ಜನರು ಸಾವನ್ನಪ್ಪಿದ್ದಾರೆ. ಇದರ ಬೆನ್ನಲ್ಲೇ ಹೊಸದಾಗಿ 75 ಒಮಿಕ್ರಾನ್​ ಪ್ರಕರಣಗಳು ಕಾಣಿಸಿಕೊಂಡಿವೆ. ಈ ಮೂಲಕ ಒಟ್ಟು ಸೋಂಕಿತಗಳ ಸಂಖ್ಯೆ 653ಕ್ಕೆ ಏರಿಕೆಯಾಗಿದೆ.

ಮುಂಬೈನಲ್ಲೇ ದಾಖಲೆಯ 10,860 ಸೋಂಕಿತರು ಪತ್ತೆಯಾಗಿದ್ದು, ಇದರಿಂದ ಮತ್ತಷ್ಟು ಆತಂಕ ಶುರುವಾಗಿದೆ. ಮುಂಬೈನಲ್ಲಿ 389 ಬಿಲ್ಡಿಂಗ್​​​ ಹಾಗೂ 16 ಸ್ಲಂಗಳನ್ನ ಸಿಲ್​ಡೌನ್​ ಮಾಡಲಾಗಿದ್ದು, ನಾಳೆಯಿಂದ ಕಾಲೇಜ್​ಗಳು ಬಂದ್​​ ಆಗಲಿವೆ.

ಇದನ್ನೂ ಓದಿ:ಒಂದಲ್ಲ, ಎರಡಲ್ಲ, ಬರೋಬ್ಬರಿ 11 ಸಲ ಕೋವಿಡ್​ ಲಸಿಕೆ ಪಡೆದ ವೃದ್ಧ: ಹೇಳಿದ್ದೇನು ಗೊತ್ತಾ?

ಉಳಿದಂತೆ ನವದೆಹಲಿಯಲ್ಲಿ 5 ಸಾವಿರ ಹೊಸ ಪ್ರಕರಣ ದಾಖಲಾಗಿದ್ದು, ಗುಜರಾತ್​​ನಲ್ಲಿ 2,265 ಕೇಸ್, ಪಂಜಾಬ್​ನಲ್ಲಿ 1,027, ತಮಿಳುನಾಡು 2,700, ಬಿಹಾರ 800 ಹಾಗೂ ಕರ್ನಾಟಕದಲ್ಲಿ 2,479 ಹೊಸ ಕೊರೊನಾ ಪ್ರಕರಣ ಕಾಣಿಸಿಕೊಂಡಿವೆ.

ಕೊರೊನಾ ಇಷ್ಟೊಂದು ವೇಗವಾಗಿ ಹರಡಲು ಒಮಿಕ್ರಾನ್​​ ಕಾರಣ ಎಂದು ಹೇಳಲಾಗುತ್ತಿದ್ದು, ಈಗಾಗಲೇ ಸೋಂಕು ತಡೆಗಟ್ಟಲು ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ.

ಮುಂಬೈನಲ್ಲಿ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾತನಾಡಿರುವ ಮೇಯರ್​, ಕೋವಿಡ್​ ಪ್ರಕರಣ ಪ್ರತಿದಿನ 20 ಸಾವಿರ ಗಡಿ ದಾಟಿದರೆ ಲಾಕ್​ಡೌನ್​ ಘೋಷಣೆ ಮಾಡಲಾಗುವುದು ಎಂದಿದ್ದಾರೆ.

ABOUT THE AUTHOR

...view details