ನಲಸೋಪಾರಾ (ಮಹಾರಾಷ್ಟ್ರ): ಜಾರ್ಖಂಡ್‌ನ ನಕ್ಸಲ್ ನಾಯಕನೊಬ್ಬನನ್ನು ಮಹಾರಾಷ್ಟ್ರದ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್) ಬಂಧಿಸಿದೆ. ದೀಪಕ್ ಯಾದವ್ ಅಲಿಯಾಸ್ ಕಾರು ಹುಲಸ್ ಯಾದವ್ ಎಂಬಾತನೇ ಬಂಧಿತ ನಕ್ಸಲ್.
ಜಾರ್ಖಂಡ್‌ನ ಹಜಾರಿಬಾಗ್‌ನ ನಿವಾಸಿಯಾಗಿರುವ ದೀಪಕ್ ಯಾದವ್ ತಲೆಗೆ 15 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಅಲ್ಲದೇ, ಜಾರ್ಖಂಡ್ ಸರ್ಕಾರ ಈತನನ್ನು ಮೋಸ್ಟ್ ವಾಂಟೆಡ್ ನಕ್ಸಲ್ ಎಂದೂ ಪ್ರಕಟಿಸಿತ್ತು.
ಚಿಕಿತ್ಸೆಗೆ ಬಂದು ಸಿಕ್ಕಿಬಿದ್ದ ನಕ್ಸಲ್: 45 ವರ್ಷದ ಕಾರು ಹುಲಸ್ ಯಾದವ್ ತನ್ನ ಕಾಲಿಗೆ ಗಾಯವಾಗಿದ್ದು, ಇದರ ಚಿಕಿತ್ಸೆಗೆಂದು ಜಾರ್ಖಂಡ್‌ನಿಂದ ಮಹಾರಾಷ್ಟ್ರಕ್ಕೆ ಬಂದಿದ್ದ. ರಾಜ್ಯ ರಾಜಧಾನಿ ಮುಂಬೈನಿಂದ ಕೇವಲ 50 ಕಿಲೋ ಮೀಟರ್ ದೂರದಲ್ಲಿರುವ ಪಲ್ಘಾರ್ ಜಿಲ್ಲೆಯ ನಲಸೋಪಾರಾದ ಧನಿವ್ ಬಾಗ್ ರಾಮ್ ನಗರ ಪ್ರದೇಶದಲ್ಲಿ ಉಳಿದುಕೊಂಡಿದ್ದ ಎಂದು ಹೇಳಲಾಗಿದೆ.