ಮುಂಬೈ (ಮಹಾರಾಷ್ಟ್ರ): ಶಿವಸೇನೆ ಶಾಸಕರ ಅನರ್ಹತೆ ಪ್ರಕರಣ ಸಂಬಂಧಿಸಿದಂತೆ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ವಿಚಾರಣೆಯನ್ನು ಮಂಗಳವಾರದಿಂದ ಆರಂಭಿಸಿದ್ದಾರೆ. ಏಕನಾಥ್ ಶಿಂಧೆ ಬಣದ ಪರವಾಗಿ ಶಿವಸೇನೆ (ಉದ್ಧವ್ ಠಾಕ್ರೆ ಬಣ) ಶಾಸಕ ಮತ್ತು ಮುಖ್ಯ ಸಚೇತಕ ಸುನೀಲ್ ಪ್ರಭು ಅವರನ್ನು ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ವಿಚಾರಣೆಗೆ ಒಳಪಡಿಸಿದರು.
ಶಾಸಕರ ಅನರ್ಹತೆ ಕುರಿತು ಡಿಸೆಂಬರ್ 31ರೊಳಗೆ ನಿರ್ಧರಿಸುವಂತೆ ಸ್ಪೀಕರ್‌ಗೆ ಸುಪ್ರೀಂ ಕೋರ್ಟ್ ನೀಡಿದೆ. ಈ ಗಡುವಿನ ದಿನಾಂಕ ಹತ್ತಿರವಾಗುತ್ತಿದ್ದಂತೆ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ವಿಚಾರಣೆಯ ಪ್ರಕ್ರಿಯೆಗೆ ವೇಗ ನೀಡಿದ್ದಾರೆ. ಈ ವೇಳೆ, ಇಂಗ್ಲಿಷ್ ಹಾಗೂ ಮರಾಠಿ ಉತ್ತರಿಸುವ ವಿಷಯವಾಗಿ ಸುನೀಲ್ ಪ್ರಭು ಮತ್ತು ಜೇಠ್ಮಲಾನಿ ನಡುವೆ ವಾಗ್ವಾದ ನಡೆದಿದೆ.
ಸುನೀಲ್ ಪ್ರಭು ತಮ್ಮ ಪಕ್ಷದ ಸದಸ್ಯರು ಮರಾಠಿಯಲ್ಲಿ ಮಾತ್ರ ಉತ್ತರಿಸುತ್ತಾರೆ ಎಂದು ಹೇಳಿದರು. ಆಗ ಜೇಠ್ಮಲಾನಿ, ನೀವು ಅನರ್ಹತೆ ಅರ್ಜಿಯನ್ನು ಇಂಗ್ಲಿಷ್‌ನಲ್ಲಿ ಸಲ್ಲಿಸಿದ್ದೀರಾ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರಭು, 'ವಕೀಲರು ನನಗೆ ಮರಾಠಿಯಲ್ಲಿ ಸಂಕ್ಷಿಪ್ತವಾಗಿ ವಿವರಿಸಿದರು. ನಂತರ ಇಂಗ್ಲಿಷ್‌ನಲ್ಲಿ ಅರ್ಜಿ ಭರ್ತಿ ಮಾಡಿದರು ಎಂಬುವುದಾಗಿ ಹೇಳಿದರು. ಈ ವೇಳೆ, ಮರಾಠಿಯಲ್ಲಿ ವಿವರಗಳನ್ನು ತಿಳಿಸಿರುವ ಬಗ್ಗೆ ಅರ್ಜಿಯಲ್ಲಿ ಯಾವುದೇ ಉಲ್ಲೇಖವಿಲ್ಲ ಎಂದು ಜೇಠ್ಮಲಾನಿ ತಿಳಿಸಿದರು.