ಕರ್ನಾಟಕ

karnataka

ETV Bharat / bharat

ಮಹಾರಾಷ್ಟ್ರ: ಒಂದೇ ಕುಟುಂಬದ 9 ಜನರ ನಿಗೂಢ ಸಾವು, ಆತ್ಮಹತ್ಯೆ ಶಂಕೆ - A shocking incident has taken place at Mhaisal in Miraj taluka

ಮಹಿಸಾಲ್ ಗ್ರಾಮದ ಎರಡು ಸ್ಥಳಗಳಲ್ಲಿ ಶವಗಳು ಪತ್ತೆಯಾಗಿವೆ. ನಿಗೂಢ ಸಾವು ಪ್ರಕರಣಕ್ಕೆ ಸದ್ಯ ನಿಖರ ಕಾರಣ ತಿಳಿದುಬಂದಿಲ್ಲ.

ಮಹಾರಾಷ್ಟ್ರದಲ್ಲಿ 9 ಜನ ಸಾವಿಗೀಡಾಗಿದ್ದಾರೆ
ಮಹಾರಾಷ್ಟ್ರದಲ್ಲಿ 9 ಜನ ಸಾವಿಗೀಡಾಗಿದ್ದಾರೆ

By

Published : Jun 20, 2022, 3:55 PM IST

ಸಾಂಗಲಿ(ಮಹಾರಾಷ್ಟ್ರ): ಮಿರಜ್ ತಾಲೂಕಿನ ಮಹಿಸಾಲ್ ಗ್ರಾಮದ ಒಂದೇ ಕುಟುಂಬದ ಒಂಬತ್ತು ಮಂದಿಯ ಮೃತದೇಹಗಳು ನಿಗೂಢ ರೀತಿಯಲ್ಲಿ ಪತ್ತೆಯಾಗಿವೆ. ಪಶುವೈದ್ಯ ಮಾಣಿಕ್ ಯಲ್ಲಪ್ಪ ವನಮೋರೆ ಮತ್ತು ಅವರ ಸಹೋದರ ಪೋಪಟ್ ಯಲ್ಲಪ್ಪ ವನಮೋರೆ, ತಾಯಿ, ಹೆಂಡತಿ ಮತ್ತು ಮಕ್ಕಳ ಶವಗಳು ಗ್ರಾಮದ ಎರಡು ಸ್ಥಳಗಳಲ್ಲಿ ದೊರೆತಿವೆ.

ಕುಟುಂಬದವರೆಲ್ಲರೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗುತ್ತಿದೆ. ಆದರೆ, ತಕ್ಷಣಕ್ಕೆ ಇಷ್ಟೊಂದು ಜನರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೀರಜ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ.

ಇದನ್ನೂ ಓದಿ: ಪ್ರಧಾನಿ ಮೋದಿಗಾಗಿ ಸಿದ್ಧವಾಯ್ತು ಕೆಂಪು ಬಣ್ಣದ ರೇಷ್ಮೆ ನೂಲಿನ ಮೈಸೂರು ಪೇಟ

For All Latest Updates

TAGGED:

ABOUT THE AUTHOR

...view details