ಔರಂಗಾಬಾದ್(ಮಹಾರಾಷ್ಟ್ರ): ಮಹಾಮಾರಿ ಕೊರೊನಾ ವೈರಸ್ ಎರಡನೇ ಹಂತದ ಅಲೆ ಮಹಾರಾಷ್ಟ್ರದಲ್ಲಿ ಜೋರಾಗಿ ಬೀಸುತ್ತಿದೆ. ಮಂಗಳವಾರ ಒಂದೇ ದಿನ 55 ಸಾವಿರಕ್ಕೂ ಅಧಿಕ ಸೋಂಕು ಪ್ರಕರಣ ಪತ್ತೆಯಾಗಿದ್ದರೆ, 250ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಕೋವಿಡ್ನಿಂದ ಸಾವನ್ನಪ್ಪಿರುವ 8 ಮಂದಿಯ ಮೃತದೇಹಗಳನ್ನು ಒಂದೇ ಚಿತೆ ಮೇಲೆ ಸಾಮೂಹಿಕವಾಗಿ ಅಂತ್ಯಕ್ರಿಯೆ ನಡೆಸಿರುವ ಘಟನೆ ಔರಂಗಾಬಾದ್ನಲ್ಲಿ ನಡೆದಿದೆ. ಇಲ್ಲಿನ ಸ್ಥಳೀಯ ಸಂಸ್ಥೆ ಈ ಕಾರ್ಯ ನಡೆಸಿದೆ. ಇದಕ್ಕೆ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆಂಬ ಮಾತು ಸಹ ಕೇಳಿ ಬಂದಿದೆ. ಆದರೆ ಮುನ್ಸಿಪಲ್ ಕೌನ್ಸಿಲ್, ದೊಡ್ಡ ಮಟ್ಟದ ಚಿತೆ ತಯಾರಿಸಿ ಅದರ ಮೇಲೆ ಎಂಟು ಮೃತದೇಹಗಳನ್ನಿಟ್ಟು ಅಂತ್ಯಕ್ರಿಯೆ ನೆರವೇರಿಸಿದೆ ಎಂದು ತಿಳಿದುಬಂದಿದೆ.