ಹರಿದ್ವಾರ:ಕೋವಿಡ್-19 ಸೋಂಕಿನಿಂದಾಗಿ ಆರೋಗ್ಯ ಹದಗೆಟ್ಟಿದ್ದರಿಂದ ಅಖಿಲ್ ಭಾರತೀಯ ಅಖಾರ ಪರಿಷತ್‌ನ ಮುಖ್ಯಸ್ಥ ಮಹಂತ್ ನರೇಂದ್ರ ಗಿರಿ ಅವರನ್ನು ಏಮ್ಸ್ ಋಷಿಕೇಶ್‌ಗೆ ದಾಖಲಿಸಲಾಗಿದೆ.
ಮಹಂತ್ ನರೇಂದ್ರ ಗಿರಿ ಏಪ್ರಿಲ್ 11ರಂದು ಕೊರೊನಾ ವೈರಸ್ ಪರೀಕ್ಷೆಯಿಂದ ಸೋಂಕು ಇರುವುದು ದೃಢಪಟ್ಟಿತ್ತು. ಆ ಬಳಿಕ ತಮ್ಮ ಆಶ್ರಮದಲ್ಲಿ ಐಸೋಲೇಷನ್ಗೆ ಒಳಗಾದರು. ಅವರ ಆರೋಗ್ಯ ಸ್ಥಿತಿ ಹದಗೆಡುತ್ತಿದಂತೆ ಹರಿದ್ವಾರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.