ಬಕ್ಸಾ (ಅಸ್ಸೋಂ): 'ಮಹಾಜೋತ್'ನ 'ಮಹಾಜೂಟ್' ಬಹಿರಂಗವಾಗಿದ್ದು, ಅಸ್ಸೋಂನಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ರಚನೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆ ಪ್ರಚಾರ ಕಾರ್ಯ ಮುಂದುವರೆಸಿರುವ ಪಿಎಂ ಮೋದಿ ಇಂದು ಬಕ್ಸಾ ಜಿಲ್ಲೆಯ ತಮುಲ್ಪುರದಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದರು.
ಅಸ್ಸೋಂನಲ್ಲಿ ಕಾಂಗ್ರೆಸ್ - ಎಐಯುಡಿಎಫ್ ಮಹಾಜೋತ್ (ಮೈತ್ರಿಕೂಟ)ನ ಮಹಾಜೂಟ್ ( ದೊಡ್ಡ ಸುಳ್ಳು) ಬಹಿರಂಗವಾಗಿದೆ. ಅಸ್ಸೋಂ ಜನರು ರಾಜ್ಯದ ಗುರುತನ್ನು ಅವಮಾನಿಸುವ ಮತ್ತು ಹಿಂಸಾಚಾರ ಮಾಡುವವರನ್ನು ಸಹಿಸಲಾರರು. ಎನ್ಡಿಎ ಸರ್ಕಾರ ರಚಿಸಲು ಜನರು ಸಿದ್ಧರಾಗಿದ್ದಾರೆ ಎಂದು ಮೋದಿ ಹೇಳಿದರು.