ಮುಂಬೈ(ಮಹಾರಾಷ್ಟ್ರ): ರಾಜ್ಯದಲ್ಲಿ ವರುಣಾರ್ಭಟ ಮುಂದುವರಿದಿದ್ದು, ರಾಯಗಢ ಹಾಗೂ ಮಹಾಡ್ನ ಹಲವೆಡೆ ಭೂ ಕುಸಿತ ಉಂಟಾಗಿದೆ. ಮಳೆ ತಂದಿಟ್ಟ ಅವಾಂತರಗಳಿಂದ ಸಾವಿನ ಸಂಖ್ಯೆ 136ಕ್ಕೆ ಏರಿದೆ. ಮಹಾಡ್ನ ಮೌಜೆ ಮೌಜೆ ತುಳಾಯೆಯಲ್ಲಿ ಭೂ ಕುಸಿತ ಸಂಭವಿಸಿದ್ದು, ಅವಶೇಷಗಳಡಿ 85 ಕ್ಕೂ ಹೆಚ್ಚು ಜನರು ಸಿಲುಕಿಕೊಂಡಿದ್ದರು.
ಈ ಪೈಕಿ ಎನ್ಡಿಆರ್ಎಫ್ ಸಿಬ್ಬಂದಿ 38 ಮೃತದೇಹಗಳನ್ನು ಹೊರತೆಗೆದಿದ್ದಾರೆ. 47 ಮಂದಿ ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ. ರಣಭೀಕರ ಮಳೆಗೆ 13 ಎತ್ತುಗಳು ಸೇರಿ 33 ಪ್ರಾಣಿಗಳು ಮೃತಪಟ್ಟಿವೆ. ಜೀವ ಭಯದಿಂದ 250 ಕ್ಕೂ ಹೆಚ್ಚು ಜನರು ಊರನ್ನು ತೊರೆದಿದ್ದಾರೆ.
ಪೋಲಾಡ್ಪುರದ ಮೌಜೆ ಸಖರ್ ಸುತರ್ವಾಡಿಯಲ್ಲಿ ಸಂಭವಿಸಿದ ಭೂ ಕುಸಿತದಿಂದಾಗಿ ಐವರು ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಮಂಗಾಂವ್ ಉಪ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.