ನಾಗ್ಪುರ (ಮಹಾರಾಷ್ಟ್ರ): 19 ವರ್ಷದ ಯುವಕನೊಬ್ಬ ತನ್ನ 17 ವರ್ಷದ ಪ್ರಿಯತಮೆಯನ್ನು ಅಪಹರಿಸಿ ಚಿತ್ರ ಹಿಂಸೆ ನೀಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೆ, ಕೃತ್ಯವನ್ನು ಚಿತ್ರೀಕರಿಸಿ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾನೆ.
ಈ ಕುರಿತು ಪ್ರತಿಕ್ರಿಯಿಸಿರುವ ನಾಗ್ಪುರ ಪೊಲೀಸ್ ಅಧಿಕಾರಿ, ಆರೋಪಿ ಸಮೀರ್ ಖಾನ್ ಸಲೀಂ ಖಾನ್ 2019 ರಲ್ಲಿ ಬಾಲಕಿಯೊಂದಿಗೆ ಸ್ನೇಹ ಬೆಳೆಸಿದ್ದ. ಇವರಿಬ್ಬರು ಜೊತೆಯಾಗಿ ಅನೇಕ ಟಿಕ್ಟಾಕ್ ವಿಡಿಯೋ ಮಾಡಿ ಜಾಲತಾಣಗಳಿಗೆ ಅಪ್ಲೋಡ್ ಮಾಡುತ್ತಿದ್ದರು ಎಂದಿದ್ದಾರೆ.
ಬಾಲಕಿ ಮತ್ತೊಬ್ಬನ ಜತೆಯೂ ಸಂಬಂಧ ಹೊಂದಿದ್ದಾಳೆಂದು ಖಾನ್ ಶಂಕಿಸಿದ್ದರಿಂದ ಸಂಬಂಧದಲ್ಲಿ ಬಿರುಕು ಮೂಡಿತು. ಅಲ್ಲದೆ, ಮದುವೆಯಾಗುವುದಾಗಿ ನಂಬಿಸಿ, ಬಾಲಕಿಯೊಂದಿಗೆ ದೈಹಿಕ ಸಂಪರ್ಕ ಸಹ ಬೆಳೆಸಿದ್ದ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.