ಕರ್ನಾಟಕ

karnataka

ETV Bharat / bharat

ಲವರ್ ಜೊತೆ ಫೋನ್​​ನಲ್ಲಿ ಮಾತನಾಡಿದ್ದಕ್ಕೆ ಗದರಿಸಿದ ತಾಯಿ.. ಪ್ರಾಣ ಕಳೆದುಕೊಂಡ ಯುವ ಜೋಡಿ - ಮಹಾರಾಷ್ಟ್ರ ಕ್ರೈಂ ನ್ಯೂಸ್​

ಪರಸ್ಪರ ಪ್ರೀತಿಸುತ್ತಿದ್ದ ಯುವ ಜೋಡಿವೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ನಾಗ್ಪುರ್​ದಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.

Teen couple commits suicide in maharashtra
Teen couple commits suicide in maharashtra

By

Published : Mar 12, 2022, 4:50 PM IST

ನಾಗ್ಪುರ್​(ಮಹಾರಾಷ್ಟ್ರ):ಚಲಿಸುತ್ತಿದ್ದ ರೈಲಿನಡಿ ಸಿಲುಕಿ ಯುವ ಜೋಡಿವೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಾಗ್ಪುರದಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಗ್ಪುರ ಜಿಲ್ಲೆಯ ಕಂಪ್ಟಿಯಲ್ಲಿರುವ ರೈಲ್ವೆ ಹಳಿ ಮೇಲೆ ಆದಿತ್ಯ ಲಕ್ಷಿನಾರಾಯಣ(18), ಸಯಾಲಿ ಗೌತಮ್​(16) ಆತ್ಮಹತ್ಯೆಗೆ ಶರಣಾಗಿರುವ ಜೋಡಿ.

ಹೌರಾ-ಮುಂಬೈ ಎಕ್ಸ್​​ಪ್ರೆಸ್​ ರೈಲು ಚಲಿಸುತ್ತಿದ್ದ ವೇಳೆ ಏಕಾಏಕಿ ರೈಲು ಹಳಿ ಮೇಲೆ ತೆರಳಿ ಪ್ರಾಣ ಕಳೆದುಕೊಂಡಿದ್ದಾರೆಂದು ಉಪ ಪೊಲೀಸ್​ ಆಯುಕ್ತ ವಿ ಮನೀಶ್​ ಕಲ್ವಾನಿಯಾ ತಿಳಿಸಿದ್ದಾರೆ.

ಇದನ್ನೂ ಓದಿರಿ:ಲ್ಯಾಂಡಿಂಗ್ ವೇಳೆ ರನ್​ವೇಯಿಂದ ಜಾರಿದ ಏರ್​ ಇಂಡಿಯಾ ವಿಮಾನ.. ಪ್ರಯಾಣಿಕರು ಸುರಕ್ಷಿತ

ಈ ಕಾರಣಕ್ಕಾಗಿ ಆತ್ಮಹತ್ಯೆ?:ಆದಿತ್ಯನೊಂದಿಗೆ ಸಯಾಲಿ ಫೋನ್​​ನಲ್ಲಿ ಮಾತನಾಡಿದ್ದಕ್ಕಾಗಿ ಸಯಾಲಿ ತಾಯಿ ಗದರಿಸಿದ್ದರಂತೆ. ಇದರ ಬೆನ್ನಲ್ಲೇ ಈ ಜೋಡಿ ಮನೆಯಿಂದ ಓಡಿ ಹೋಗಿತ್ತು. ಕನ್ಹಾನ್ ನದಿ ಬಳಿ ಬೈಕ್ ನಿಲ್ಲಿಸಿ, ರೈಲ್ವೆ ಹಳಿ ಮೇಲೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಜೋಡಿ ಜೈಭೀಮ್​ ಚೌಕ್​ನಲ್ಲಿ ತಮ್ಮ ಪೋಷಕರೊಂದಿಗೆ ವಾಸವಾಗಿದ್ದು, ಕಳೆದ ಕೆಲ ತಿಂಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗ್ತಿದೆ.

ಮಗಳು ಮನೆಯಿಂದ ಕಾಣೆಯಾಗುತ್ತಿದ್ದಂತೆ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಆದಿತ್ಯ ವಿರುದ್ಧ ನ್ಯೂ ಕಂಪ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರು ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದಲೇ ಮನೆಯಿಂದ ಹೊರಬಂದಿದ್ದರು ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details