ಮುಂಬೈ:ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮಹಾರಾಷ್ಟ್ರದಾದ್ಯಂತ 75,000 ತ್ರಿವರ್ಣ ಧ್ವಜಗಳನ್ನು ಹಾರಿಸಲು ಮುಂಬೈನ ಮುಸ್ಲಿಂ ಸಂಘಟನೆಯೊಂದು ಸಿದ್ಧತೆ ನಡೆಸಿದೆ. ಮನೆಗಳು, ಮದರಸಾಗಳು ಮತ್ತು ಮಸೀದಿಗಳ ಮೇಲೆ ತ್ರಿವರ್ಣ ಹಾರಿಸುವ ಗುರಿ ಹೊಂದಿದ್ದೇವೆ. ದೇಶದಲ್ಲೇ ಪ್ರಪ್ರಥಮ ಬಾರಿಗೆ ಆರಂಭಿಸಿರುವ ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ಎಲ್ಲರಿಗೂ ಅವಕಾಶ ಸಿಗಲಿದೆ ಎಂದು ಅಂತಾರಾಷ್ಟ್ರೀಯ ಸೂಫಿ ಕರ್ವಾ ಸಂಘಟನೆ ಅಧ್ಯಕ್ಷ ಮೀರಾ ರೋಡ್ ಪ್ರದೇಶದ ಮುಫ್ತಿ ಮಂಜೂರ್ ಜೈ ಹೇಳಿದರು.
ಮುಂಬೈ: 75 ಸಾವಿರ ತಿರಂಗಾ ಹಾರಿಸಲು ಮುಸ್ಲಿಂ ಸಂಘಟನೆಯಿಂದ ಸಿದ್ಧತೆ - ತ್ರಿವರ್ಣ ಧ್ವಜ
ಮನೆಗಳು, ಮದರಸಾಗಳು ಮತ್ತು ಮಸೀದಿಗಳ ಮೇಲೆ 75,000 ತ್ರಿವರ್ಣ ಧ್ವಜಗಳನ್ನು ಹಾರಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಸೂಫಿ ಕರ್ವಾ ಸಂಸ್ಥೆ ಅಧ್ಯಕ್ಷ ಮುಫ್ತಿ ಮಂಜೂರ್ ಜೈ ಹೇಳಿದ್ದಾರೆ.
ಧ್ವಜಗಳನ್ನು ಹಾರಿಸಲು ಮುಸ್ಲಿಂ ಸಂಘಟನೆ ಸಿದ್ಧತೆ
ಈ ಸಂಸ್ಥೆಯ ಮೂಲಕ ರಾಜ್ಯಾದ್ಯಂತ ಇದುವರೆಗೆ 30 ಸಾವಿರ ರಾಷ್ಟ್ರಧ್ವಜಗಳನ್ನು ವಿತರಿಸಲಾಗಿದೆ. ಒಟ್ಟಾರೆ 75 ಸಾವಿರ ರಾಷ್ಟ್ರಧ್ವಜ ವಿತರಿಸಲು ಸಂಕಲ್ಪ ಮಾಡಿದ್ದೇವೆೆ ಎಂದರು.
ಇದನ್ನೂ ಓದಿ:ಅರಣ್ಯ ರಕ್ಷಣೆಗೆ ಪ್ರಾಣ ಮುಡಿಪಿಟ್ಟ ಧೀರೆ: ಕಾಡುಗಳ್ಳರ ವಿರುದ್ಧ ಫಾರೆಸ್ಟ್ ಆಫೀಸರ್ ಅಶ್ವಿನಾ ಸಮರ