ಕರ್ನಾಟಕ

karnataka

ETV Bharat / bharat

ಅನಾಥ ವಿಶೇಷಚೇತನ ಯುವತಿಯ ಕನ್ಯಾದಾನ ಮಾಡಿದ 'ಮಹಾ' ಗೃಹ ಸಚಿವರು

ನಾಗ್ಪುರದ ರೈಲ್ವೆ ನಿಲ್ದಾಣದಲ್ಲಿ 23 ವರ್ಷಗಳ ಹಿಂದೆ ಈ ವಿಶೇಷಚೇತನ ಯುವತಿಯನ್ನು ಯಾರೋ ಬಿಟ್ಟು ಹೋಗಿದ್ದರು. ಬಳಿಕ ಸಾಮಾಜಿಕ ಕಾರ್ಯಕರ್ತ ಶಂಕರ್​​ ಬಾಬಾ ಪಾಪಲ್ಕರ್ ಅವರು ಅಮರಾವತಿ ಜಿಲ್ಲೆಯ ತಮ್ಮ ಅನಾಥಾಶ್ರಮದಲ್ಲಿಟ್ಟು ಸಾಕಿದ್ದರು..

ಕನ್ಯಾದಾನ
ಕನ್ಯಾದಾನ

By

Published : Dec 16, 2020, 12:36 PM IST

ನಾಗ್ಪುರ :ಮಹಾರಾಷ್ಟ್ರದ ಗೃಹ ಸಚಿವ ಅನಿಲ್​​ ದೇಶ್​ಮುಖ್​​ ಮತ್ತು ಅವರ ಪತ್ನಿ ಅನಾಥ ವಿಶೇಷ ಚೇತನ ವಧುವಿನ ಕನ್ಯಾದಾನ ಮಾಡಿದ್ದಾರೆ.

ನಾಗ್ಪುರದ ಕಲೆಕ್ಟರ್​​ ರವೀಂದ್ರ ಠಾಕ್ರೆ ಮತ್ತು ಅವರ ಪತ್ನಿ, ವರನಿಗೆ ತಂದೆಯ ಕರ್ತವ್ಯ ನಿರ್ವಹಿಸಿದ್ದಾರೆ. ವರ ಕೂಡ ವಿಶೇಷಚೇತನನಾಗಿದ್ದು, ವರ ಮತ್ತು ವಧು ಇಬ್ಬರಿಗೂ ಕಿವಿ ಹಾಗೂ ಮಾತು ಬರುವುದಿಲ್ಲ ಎಂದು ಜಿಲ್ಲಾ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನಾಗ್ಪುರದ ರೈಲ್ವೆ ನಿಲ್ದಾಣದಲ್ಲಿ 23 ವರ್ಷಗಳ ಹಿಂದೆ ಈ ವಿಶೇಷಚೇತನ ಯುವತಿಯನ್ನು ಯಾರೋ ಬಿಟ್ಟು ಹೋಗಿದ್ದರು. ಬಳಿಕ ಸಾಮಾಜಿಕ ಕಾರ್ಯಕರ್ತ ಶಂಕರ್​​ ಬಾಬಾ ಪಾಪಲ್ಕರ್ ಅವರು ಅಮರಾವತಿ ಜಿಲ್ಲೆಯ ತಮ್ಮ ಅನಾಥಾಶ್ರಮದಲ್ಲಿಟ್ಟು ಸಾಕಿದ್ದರು.

ಓದಿ:1971ರ ಭಾರತ-ಪಾಕ್​ ಯುದ್ಧದ 50ನೇ ವಿಜಯೋತ್ಸವ: ಹುತಾತ್ಮ ಯೋಧರಿಗೆ ಪ್ರಧಾನಿ ಗೌರವ

ಈ 27 ವರ್ಷದ ಯುವಕ ಎರಡು ವರ್ಷವನಿದ್ದಾಗ ಥಾಣೆ ಜಿಲ್ಲೆಯ ಡೊಂಬಿವಾಲಿಯಲ್ಲಿ ಅನಾಥವಾಗಿ ಸಿಕ್ಕಿದ್ದ. ಇವನನ್ನು ಕೂಡ ಪಾಪಲ್ಕರ್ ಅವರು ದತ್ತು ಪಡೆದು ತಮ್ಮ ಅನಾಥಾಶ್ರಮದಲ್ಲಿ ಬೆಳೆಸಿದ್ದರು. ಇಬ್ಬರ ಮದುವೆ ಡಿಸೆಂಬರ್ 20ರಂದು ನಡೆಯಲಿದೆ.

ABOUT THE AUTHOR

...view details