ಮುಂಬೈ/ ಕೊಚ್ಚಿನ್:ಕರ್ನಾಟಕದ ಅಕ್ಕಪಕ್ಕದ ರಾಜ್ಯಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಫೆಬ್ರವರಿಯಿಂದ ನಿಧಾನಗತಿಯಲ್ಲಿ ಏರಿಕೆ ಕಂಡು ಬರುತ್ತಿದೆ. ಮಹಾರಾಷ್ಟ್ರದಲ್ಲಿ ಇಂದು 1,081 ಹೊಸ ಪ್ರಕರಣ ಪತ್ತೆಯಾಗಿದೆ. ಫೆಬ್ರವರಿ 24 ರ ನಂತರ ದೈನಂದಿನ ಅತ್ಯಧಿಕ ಏರಿಕೆ ಇದಾಗಿದೆ ಎಂದು ಮಹಾರಾಷ್ಟ್ರ ರಾಜ್ಯ ಆರೋಗ್ಯ ಇಲಾಖೆ ಬುಲೆಟಿನ್‌ನಲ್ಲಿ ತಿಳಿಸಿದೆ.
ಇತ್ತ ಕೇರಳದಲ್ಲಿ 1370 ಮಂದಿಗೆ ಸೋಂಕು ದೃಢವಾಗಿದೆ. ಸೋಂಕಿನಿಂದ 630 ಗುಣಮುಖರಾಗಿದ್ದಾರೆ. ಆದರೆ 6 ಸಾವುಗಳು ಸಂಭವಿಸಿವೆ. ಕರ್ನಾಟಕ ಗಡಿ ಹಂಚಿಕೊಂಡಿರುವ ರಾಜ್ಯಗಳಲ್ಲಿ ಸೋಂಕಿನ ಸಂಖ್ಯೆ ಏರಿಕೆ ಆಗುತ್ತಿರುವುದು ಮತ್ತೆ ಭೀತಿಗೆ ಕಾರಣವಾಗಿದೆ. ಮೊದಲನೇ ಮತ್ತು ಎರಡನೇ ಅಲೆಯಲ್ಲಿ ಪಕ್ಕದ ರಾಜ್ಯಗಳಿಂದಾದ ಸಮಸ್ಯೆಯನ್ನು ರಾಜ್ಯ ಮರೆಯುವಂತಿಲ್ಲ.