ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರದ ಬಂಡಾಯ ಶಾಸಕರು ಮತ್ತು ಅವರ ಕುಟುಂಬಗಳಿಗೆ ಸೂಕ್ತ ಭದ್ರತೆ ಕಲ್ಪಿಸುವ ಸಂಬಂಧ ಕೇಂದ್ರ ಸರ್ಕಾರಕ್ಕೆ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಪತ್ರ ಬರೆದಿದ್ದಾರೆ. ಬಂಡಾಯ ಶಾಸಕರು ಹಾಗೂ ಅವರ ಕುಟುಂಬಗಳ ಭದ್ರತೆ ಖಚಿತಪಡಿಸಿಕೊಳ್ಳುವ ಅಗತ್ಯವಿದ್ದಲ್ಲಿ, ತಕ್ಷಣವೇ ನಿಯೋಜಿಸಲು ಕೇಂದ್ರ ಭದ್ರತಾ ಪಡೆಗಳ ವ್ಯವಸ್ಥೆ ಮಾಡುವಂತೆ ಅವರು ತಿಳಿಸಿದ್ದಾರೆ.
ಕೇಂದ್ರ ಗೃಹ ಕಾರ್ಯದರ್ಶಿ ಎ.ಕೆ. ಭಲ್ಲಾ ಅವರಿಗೆ ಪತ್ರ ಬರೆದಿರುವ ರಾಜ್ಯಪಾಲರು, 38 ಶಿವಸೇನೆ ಶಾಸಕರು, ಇಬ್ಬರು ಪ್ರಹರ್ ಜನಶಕ್ತಿ ಪಕ್ಷದ ಶಾಸಕರು ಮತ್ತು ಏಳು ಜನ ಪಕ್ಷೇತರ ಶಾಸಕರಿಂದ ತಮ್ಮ ಕುಟುಂಬಗಳಿಗೆ ಒದಗಿಸಿದ್ದ ಪೊಲೀಸ್ ಭದ್ರತೆಯನ್ನು ಕಾನೂನುಬಾಹಿರವಾಗಿ ಹಿಂಪಡೆಯಲಾಗಿದೆ ಎಂದು ಮಾಹಿತಿ ಸ್ವೀಕರಿಸಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ:Maharashtra political crisis.. ಅನರ್ಹತೆಯ ನೋಟಿಸ್ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಶಿಂದೆ
ಅಲ್ಲದೇ, ಕೆಲವು ರಾಜಕೀಯ ನಾಯಕರು 'ಪ್ರಚೋದನಕಾರಿ' ಮತ್ತು 'ಬೆದರಿಕೆಯ ಹೇಳಿಕೆ'ಗಳನ್ನು' ನೀಡುತ್ತಿರುವ ಹಿನ್ನೆಲೆಯಲ್ಲಿರುವ ಪ್ರಸ್ತುತ ಗುವಾಹಟಿಯಲ್ಲಿ ಶಾಸಕರು ತಮ್ಮ ಮನೆ ಮತ್ತು ಕುಟುಂಬಗಳ ಸುರಕ್ಷತೆಯ ಬಗ್ಗೆ ತುಂಬಾ ಕಳವಳ ವ್ಯಕ್ತಪಡಿಸಿದ್ದಾರೆ ಎಂದೂ ರಾಜ್ಯಪಾಲರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಜೊತೆಗೆ ಶಾಸಕರ ಕುಟುಂಬಗಳು ಮತ್ತು ಮನೆಗಳಿಗೆ ಆದ್ಯತೆಯ ಮೇಲೆ ಸಾಕಷ್ಟು ರಕ್ಷಣೆ ನೀಡುವಂತೆ ರಾಜ್ಯ ಪೊಲೀಸರಿಗೆ ಈಗಾಗಲೇ ನಿರ್ದೇಶನ ನೀಡಿರುವುದಾಗಿಯೂ ತಿಳಿಸಿದ್ದಾರೆ.