ಕರ್ನಾಟಕ

karnataka

ETV Bharat / bharat

ಸರ್ಕಾರಿ ಬಂಗಲೆ ಶುಲ್ಕ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಮಹಾರಾಷ್ಟ್ರ ರಾಜ್ಯಪಾಲ - ಹಿರಿಯ ವಕೀಲ ಅಮನ್ ಸಿನ್ಹಾ

ನಿವಾಸಗಳಿಗೆ ಚಾಲ್ತಿಯಲ್ಲಿರುವ ಮಾರುಕಟ್ಟೆ ಬಾಡಿಗೆಗೆ ಹೋಲಿಸಿದರೆ ಅಧಿಕವಾಗಿದೆ. ಇದೊಂದು ರೀತಿಯಲ್ಲಿ ದಂಡದ ಹೇರಿದಂತಾಗಿದೆ. ಬಾಡಿಗೆ ನಿರ್ಧರಿಸುವ ಪ್ರಕ್ರಿಯೆಯಲ್ಲಿ ಭಾಗಿಯಾಗಲು ಅರ್ಜಿದಾರರಿಗೆ ಯಾವುದೇ ಅವಕಾಶ ನೀಡದೇ ಹೆಚ್ಚು ಬಾಡಿಗೆ ಒಪ್ಪಿಕೊಳ್ಳಲಾಗಿದೆ ಎಂದು ಮೇಲ್ಮನವಿಯಲ್ಲಿ ತಿಳಿಸಿದ್ದಾರೆ.

maha-guv-moves-sc-seeks-stay-on-contempt-proceedings-against-him
ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ

By

Published : Nov 18, 2020, 1:34 PM IST

ನವದೆಹಲಿ: ಮಾಜಿ ಮುಖ್ಯಮಂತ್ರಿಯಾಗಿ ತಮಗೆ ಉತ್ತರಾಖಂಡ ಸರ್ಕಾರ ಹಂಚಿಕೆ ಮಾಡಿದ್ದ ಸರ್ಕಾರಿ ಬಂಗಲೆಗೆ ಮಾರುಕಟ್ಟೆ ದರದಲ್ಲಿ ಬಾಡಿಗೆ ಪಾವತಿ ಕುರಿತು ಅಲ್ಲಿನ ಹೈಕೋರ್ಟ್ ನೀಡಿರುವ ನೋಟಿಸ್‌ ಪ್ರಶ್ನಿಸಿ, ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದಾರೆ.

ವಕೀಲರಾದ ಅರ್ಧೇಂಡು ಮೌಲಿ ಪ್ರಸಾದ್ ಮತ್ತು ಪ್ರವೀಶ್ ಠಾಕೂರ್ ಅವರ ಮೂಲಕ ಅರ್ಜಿ ಸಲ್ಲಿಸಿರುವ ಕೋಶ್ಯಾರಿ, ಹೈಕೋರ್ಟ್ ಆದೇಶ ತಡೆ ಹಿಡಿಯಬೇಕು ಎಂದು ಕೋರಿದ್ದಾರೆ. ಸಂವಿಧಾನದ 361 ನೇ ವಿಧಿಯ ಅನುಸಾರ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಅಂತಹ ವಿಚಾರಣೆಯಿಂದ ರಕ್ಷಣೆ ಪಡೆಯುವಂತಿದ್ದು, ಕ್ರಮ ಜರುಗಿಸುವಂತಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ ಈ ಮನವಿಯಲ್ಲಿ ಮಾರುಕಟ್ಟೆಯ ಬಾಡಿಗೆಗಿಂತಲೂ ಅಧಿಕವಾಗಿದೆ ಹಾಗೂ ಯಾವುದೇ ತರ್ಕಬದ್ಧವಿಲ್ಲದೇ ಹಾಕಲಾಗಿದೆ ಎಂದು ವಾದಿಸಲಾಗಿದೆ.

ಇನ್ನು ಸುಪ್ರೀಂಕೋರ್ಟ್​​ನಲ್ಲಿ ಕೋಶ್ಯಾರಿ ಪರ ಹಿರಿಯ ವಕೀಲ ಅಮನ್ ಸಿನ್ಹಾ ವಾದ ಮಂಡಿಸಲಿದ್ದಾರೆ. ಮಾರುಕಟ್ಟೆ ಬಾಡಿಗೆ ನಿರ್ಧರಿಸುವ ಪ್ರಕ್ರಿಯೆಯು ಅನಿಯಂತ್ರಿತ, ತಾರತಮ್ಯ ಮತ್ತು ನ್ಯಾಯ ತತ್ವಗಳ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಇದೇ ರೀತಿ ನಿವಾಸಗಳಿಗೆ ಚಾಲ್ತಿಯಲ್ಲಿರುವ ಮಾರುಕಟ್ಟೆ ಬಾಡಿಗೆಗೆ ಹೋಲಿಸಿದರೆ ಅಧಿಕವಾಗಿದೆ. ಇದೊಂದು ರೀತಿಯಲ್ಲಿ ದಂಡ ಹೇರಿದಂತಾಗಿದೆ. ಬಾಡಿಗೆ ನಿರ್ಧರಿಸುವ ಪ್ರಕ್ರಿಯೆಯಲ್ಲಿ ಭಾಗಿಯಾಗಲು ಅರ್ಜಿದಾರರಿಗೆ ಯಾವುದೇ ಅವಕಾಶ ನೀಡದೇ ಹೆಚ್ಚು ಬಾಡಿಗೆ ಒಪ್ಪಿಕೊಳ್ಳಲಾಗಿದೆ ಎಂದು ಮೇಲ್ಮನವಿಯಲ್ಲಿ ತಿಳಿಸಿದ್ದಾರೆ.

ಉತ್ತರಾಖಂಡ್​​​​​ ಮಾಜಿ ಮುಖ್ಯಮಂತ್ರಿಗೆ ಕಚೇರಿಯನ್ನು ತ್ಯಜಿಸಿದ ನಂತರ ಸರ್ಕಾರಿ ವಸತಿ ಸೌಕರ್ಯಗಳನ್ನು ಬಳಸಿಕೊಂಡ ಅವಧಿಗೆ ಮಾರುಕಟ್ಟೆ ಬಾಡಿಗೆ ನೀಡುವಂತೆ ಹೈಕೋರ್ಟ್ ಮೇ ತಿಂಗಳಲ್ಲಿ ಆದೇಶ ನೀಡಿತ್ತು. ಎಲ್ಲ ಮಾಜಿ ಮುಖ್ಯಮಂತ್ರಿಗಳಿಗೆ ಸರ್ಕಾರಿ ಸೌಲಭ್ಯ ಒದಗಿಸುವುದು ಕಾನೂನು ಬಾಹಿರ ಎಂದು 2001ರಲ್ಲಿ ಅಭಿಪ್ರಾಯ ಪಟ್ಟಿತ್ತು.

ABOUT THE AUTHOR

...view details