ಪಾಲ್ಘರ್ (ಮಹಾರಾಷ್ಟ್ರ):ಒಂದೆಡೆ ಕೋವಿಡ್ ಕೇಸ್ಗಳು ಹೆಚ್ಚುತ್ತಿದ್ದು, ಇತ್ತ ಆಮ್ಲಜನಕದ ಕೊರತೆಯಿಂದಾಗಿ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಾಸೈ ಪಟ್ಟಣದಲ್ಲಿನ ಆಸ್ಪತ್ರೆಗಳಲ್ಲಿ ಒಂದೇ ದಿನ 10 ಮಂದಿ ಕೊರೊನಾ ರೋಗಿಗಳು ಉಸಿರು ನಿಲ್ಲಿಸಿದ್ದಾರೆ.
ವಾಸೈನಲ್ಲಿ 7,000ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ಸಕ್ರಿಯವಾಗಿದ್ದು, ಈ ಪೈಕಿ 3000 ಸೋಂಕಿತರಿಗೆ ಆಮ್ಲಜನಕ ಸೌಲಭ್ಯ ಅಗತ್ಯವಿದೆ. ನಾಲಾ ಸೋಪಾರದ ವಿನಾಯಕ ಆಸ್ಪತ್ರೆಯಲ್ಲೇ 7 ಸಾವುಗಳು ವರದಿಯಾಗಿವೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ. ಮೃತರ ಸಂಬಂಧಿಕರು ಸಹ ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಒಂದೇ ದಿನ ಇವರೆಲ್ಲರೂ ಆಮ್ಲಜನಕದ ಕೊರತೆಯಿಂದ ಮೃತಪಟ್ಟಿದ್ದಾರೆ ಎಂಬ ಆರೋಪವನ್ನು ಆಸ್ಪತ್ರೆಯ ಅಧಿಕಾರಿಗಳು ತಳ್ಳಿಹಾಕಿದ್ದಾರೆ