ಕರ್ನಾಟಕ

karnataka

ETV Bharat / bharat

ಕೊರೊನಾಗೆ ತುತ್ತಾಗುತ್ತಿರುವ ಭಾರತದ ವಾಣಿಜ್ಯ ನಗರಿ... ಲಾಕ್​ಡೌನ್​ಗೆ ‘ಮಹಾ’ ಚಿಂತನೆ!

ಭಾರತದ ವಾಣಿಜ್ಯ ನಗರಿ ಮುಂಬೈಯಲ್ಲಿ ಕೋವಿಡ್​ ಸ್ಫೋಟಗೊಂಡಿದೆ. ನಗರದಲ್ಲಿ ಮಂಗಳವಾರ 24 ಗಂಟೆಗಳ ಅವಧಿಯಲ್ಲಿ 10,000 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಒಟ್ಟಾರೆ ಮಹಾರಾಷ್ಟ್ರದಲ್ಲಿ 18,000 ಪ್ರಕರಣಗಳು ಮತ್ತು 20 ಸಾವುಗಳು ವರದಿಯಾಗಿದೆ.

By

Published : Jan 5, 2022, 9:21 AM IST

Maharashtra corona report  Covid surge in Mumbai  Lockdown in Mumbai  Maharashtra lockdown  Corona wave in Mumbai  ಮಹಾರಾಷ್ಟ್ರ ಕೋವಿಡ್​ ವರದಿ  ಕೋವಿಡ್​ನಿಂದ ಬಳಲುತ್ತಿರುವ ಮುಂಬೈ  ಮುಂಬೈಯಲ್ಲಿ ಲಾಕ್​ಡೌನ್​ ಮಹಾರಾಷ್ಟ್ರ ಲಾಕ್​ಡೌನ್​ ಮುಂಬೈಯಲ್ಲಿ ಕೊರೊನಾ ಅಲೆ
ಕೊರೊನಾಗೆ ತುತ್ತಾಗುತ್ತಿರುವ ಭಾರತದ ವಾಣಿಜ್ಯ ರಾಜಧಾನಿ ಮುಂಬೈ

ಮುಂಬೈ (ಮಹಾರಾಷ್ಟ್ರ):ಮಹಾರಾಷ್ಟ್ರದಲ್ಲಿ ಮಂಗಳವಾರ 24 ಗಂಟೆಗಳ ಅವಧಿಯಲ್ಲಿ 20 ಕೋವಿಡ್ ಪೀಡಿತ ಜನರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ನಿನ್ನೆ ಒಂದೇ ದಿನ 18,000 ಕ್ಕೂ ಹೆಚ್ಚು ಪ್ರಕರಣಗಳನ್ನು ಕಂಡು ಬಂದಿದ್ದು, ಕೋವಿಡ್​ ಪ್ರಕರಣಗಳಲ್ಲಿ ಭಾರಿ ಏರಿಕೆಯಾಗಿದೆ.

ಕಳೆದ 24 ಗಂಟೆಗಳಲ್ಲಿ 18,466 ಹೊಸ ಕೋವಿಡ್​ ಪ್ರಕರಣಗಳು ವರದಿಯಾಗಿವೆ. 10,860 ಪ್ರಕರಣಗಳು ಮುಂಬೈ ಒಂದರಿಂದಲೇ ವರದಿಯಾಗಿದ್ದು, ಇದು ಏಪ್ರಿಲ್ 7, 2021 ರಿಂದ ನಗರದಲ್ಲಿ ಅತಿ ಹೆಚ್ಚು ದೈನಂದಿನ ಕೋವಿಡ್​ ಪ್ರಕರಣಗಳಾಗಿವೆ.

ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ಮಾತನಾಡಿ, ದೈನಂದಿನ ಕೋವಿಡ್ ಪ್ರಕರಣಗಳು 20,000 ಗಡಿ ದಾಟಿದರೆ ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ನಗರದಲ್ಲಿ ಲಾಕ್‌ಡೌನ್ ವಿಧಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಸಾರ್ವಜನಿಕ ಬಸ್‌ಗಳು ಮತ್ತು ಸ್ಥಳೀಯ ರೈಲುಗಳಲ್ಲಿ ಪ್ರಯಾಣಿಸುವಾಗ ಜನರು ಟ್ರಿಪಲ್-ಲೇಯರ್ ಮಾಸ್ಕ್​ಗಳನ್ನು ಧರಿಸಬೇಕು. ಆದಷ್ಟು ಬೇಗ ಲಸಿಕೆ ಹಾಕಿಸಿಕೊಳ್ಳಲು ಮತ್ತು ಎಲ್ಲ ಕೋವಿಡ್​ ಸಂಬಂಧಿತ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್‌ಗಳನ್ನು (SOPs) ಅನುಸರಿಸುವಂತೆ ಮುಂಬೈ ಮೇಯರ್​​ ಮನವಿ ಮಾಡಿದರು.

ಕೋವಿಡ್​ನ ಹೊಸ ರೂಪಾಂತರ ಓಮಿಕ್ರಾನ್ ಪ್ರಕರಣಗಳು ಕೂಡ 653 ಕ್ಕೆ ಏರಿದೆ. ಒಟ್ಟಿನಲ್ಲಿ ಮಹಾ ರಾಜ್ಯದಲ್ಲಿ ಈಗ 66,308 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಒಟ್ಟಾರೆ ಸಾವಿನ ಸಂಖ್ಯೆ 1,41,573 ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ 4,558 ರೋಗಿಗಳು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ಬೃಹತ್​ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಮುಂಬೈನಲ್ಲಿ ಕಟ್ಟಡಗಳನ್ನು ಮುಚ್ಚಲು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇನ್ನು ಪಶ್ಚಿಮ​ ಬಂಗಾಳದಲ್ಲಿಯೂ ಕೋವಿಡ್​ ಮಹಾ ಸ್ಫೋಟಗೊಂಡಿದೆ. ಕಳೆದ 24 ಗಂಟೆಯಲ್ಲಿ 9 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿವೆ.

ABOUT THE AUTHOR

...view details