ಮುಂಬೈ (ಮಹಾರಾಷ್ಟ್ರ):ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಬಿಜೆಪಿ ಸರ್ಕಾರ ಮುಂಬೈನ ಪ್ರಮುಖ ಎರಡು ರಸ್ತೆಗಳಿಗೆ ಮರುನಾಮಕರಣ ಮಾಡಲು ನಿರ್ಧರಿಸಿದೆ. ವರ್ಸೋವಾ - ಬಾಂದ್ರಾ ಸಮುದ್ರ ಸೇತುವೆ (Versova - Bandra Sea Link)ಗೆ ಹಿಂದುತ್ವ ಸಿದ್ಧಾಂತವಾದಿ ವಿ.ಡಿ. ಸಾವರ್ಕರ್ ಹಾಗೂ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (Mumbai Trans Harbour Link)ಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿಡಲು ತೀರ್ಮಾನಿಸಲಾಗಿದೆ.
ಇಂದು ಮುಖ್ಯಮಂತ್ರಿ ಶಿಂಧೆ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಎರಡೂ ಯೋಜನೆಗಳು ನಿರ್ಮಾಣದ ಹಂತದಲ್ಲಿವೆ. 17 ಕಿಮೀ ಉದ್ದದ ವರ್ಸೋವಾ - ಬಾಂದ್ರಾ ಸಮುದ್ರ ಸೇತುವೆಯು ಮುಂಬೈನ ಎರಡನೇ ಸಮುದ್ರ ಸೇತುವೆಯಾಗಿದೆ. ಇದು ಅಂಧೇರಿ ಪ್ರವೇಶವನ್ನು ಬಾಂದ್ರಾ - ವರ್ಲಿ ಸಮುದ್ರ ಸೇತುವೆಗೆ ಸಂಪರ್ಕಿಸುತ್ತದೆ. 2018ರಿಂದ ಇದರ ಕಾಮಗಾರಿ ಆರಂಭವಾಗಿದ್ದು, 2016ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಸದ್ಯ ಬಾಂದ್ರಾದಿಂದ ವರ್ಸೋವಾ ತಲುಪಲು ಒಂದೂವರೆ ಗಂಟೆ ಸಮಯ ಹಿಡಿಯುತ್ತಿದ್ದು, ಇದರ ಯೋಜನೆಗೊಂಡಲ್ಲಿ ಕೇವಲ ಅರ್ಧ ಗಂಟೆಯ ಸಾಗುತ್ತದೆ.
ಕಳೆದ ಮೇ 28ರಂದು ನಡೆದ ಸಾವರ್ಕರ್ ಜಯಂತಿ ಕಾರ್ಯಕ್ರಮದಲ್ಲೇ ಮುಖ್ಯಮಂತ್ರಿ ಏಕನಾಥ್ ಶಿಂಧೆ, ವರ್ಸೋವಾ - ಬಾಂದ್ರಾ ಸಮುದ್ರ ಸೇತುವೆಕ್ಕೆ ವೀರ ಸಾವರ್ಕರ್ ಹೆಸರಿಡಲಾಗುವುದು ಎಂದು ಘೋಷಿಸಿದ್ದರು. ಇಂದು ವಿಷಯವು ರಾಜ್ಯ ಸಚಿವ ಸಂಪುಟದ ಮುಂದೆ ಬಂದಿದ್ದು, ಇದಕ್ಕೆ ಸಂಪುಟವು ಅಂಗೀಕಾರ ನೀಡಿದೆ. ಅದೇ ರೀತಿಯಾಗಿ ಮುಂಬೈನಿಂದ ನವಿ ಮುಂಬೈಗೆ ಸಂಪರ್ಕ ಕಲ್ಪಿಸುವ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ ಸಹ ನಿರ್ಮಾಣ ಹಂತದಲ್ಲಿದೆ. ಇದು ಈ ವರ್ಷ ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಮಾರ್ಗಕ್ಕೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿಡಲು ಸಂಪುಟ ಒಪ್ಪಿಗೆ ಕೊಟ್ಟಿದೆ.