ಕರ್ನಾಟಕ

karnataka

ETV Bharat / bharat

ರೈತರ ಖಾತೆಗಳಿಗೆ ಕನ್ನಹಾಕಿದ ಆರೋಪ: 16 ಬಿಜೆಪಿ ಶಾಸಕರ ವಿರುದ್ಧ ಕೇಸ್ ದಾಖಲು! - ಗಂಗಾಪುರ ಸಕ್ಕರೆ ಕಾರ್ಖಾನೆ ಪ್ರಕರಣ

ಕೃಷ್ಣ ಪಾಟೀಲ್ ಡೊಂಗೊಂಕರ್ ಎಂಬುವವರು ಗಂಗಾಪುರ ಪೊಲೀಸ್ ಠಾಣೆಯಲ್ಲಿ ಬುಧವಾರ ರಾತ್ರಿ ದೂರು ನೀಡಿದ ಬಳಿಕೆ ಶಾಸಕರ ವಿರುದ್ಧ ಅಕ್ರಮ ಠೇವಣೆ ಹಣ ವರ್ಗಾವಣೆ ಕೇಸ್​ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

farmers
ರೈತರು

By

Published : Nov 19, 2020, 5:51 PM IST

Updated : Nov 19, 2020, 6:06 PM IST

ಔರಂಗಾಬಾದ್:ಮಹಾರಾಷ್ಟ್ರ ಬಿಜೆಪಿ ಶಾಸಕ ಪ್ರಶಾಂತ್ ಬಾಂಬ್ ಮತ್ತು ಇತರ 15 ಜನರ ವಿರುದ್ಧ ಸಕ್ಕರೆ ಕಾರ್ಖಾನೆ ಸಂಬಂಧಿತ ಪ್ರಕರಣವೊಂದರಲ್ಲಿ ರೈತರು ಠೇವಣಿ ಇಟ್ಟಿರುವ 9 ಕೋಟಿ ರೂ. ವರ್ಗಾವಣೆ ಮಾಡಿದ ಆರೋಪದಡಿ ಪ್ರಕರಣ ದಾಖಲಾಗಿದೆ.

ಔರಂಗಾಬಾದ್ ಜಿಲ್ಲೆಯ ಗಂಗಾಪುರ ಕ್ಷೇತ್ರವನ್ನು ಪ್ರತಿನಿಧಿಸುವ ಬಾಂಬ್, ಗಂಗಾಪುರ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರೂ ಆಗಿದ್ದು, ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ.

ಕೃಷ್ಣ ಪಾಟೀಲ್ ಡೊಂಗೊಂಕರ್ ಎಂಬುವವರು ಗಂಗಾಪುರ ಪೊಲೀಸ್ ಠಾಣೆಯಲ್ಲಿ ಬುಧವಾರ ರಾತ್ರಿ ದೂರು ನೀಡಿದ ಬಳಿಕೆ ಶಾಸಕರ ವಿರುದ್ಧ ಅಕ್ರಮ ಠೇವಣೆ ಹಣ ವರ್ಗಾವಣೆ ಕೇಸ್​ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತೀಯ ದಂಡ ಸಂಹಿತೆ 420 (ಮೋಸ), 406 (ನಂಬಿಕೆಯ ಅಪರಾಧ ಉಲ್ಲಂಘನೆ), 467 (ಅಮೂಲ್ಯವಾದ ಭದ್ರತೆಯ ವಂಚನೆ), 468 (ಮೋಸ ಮಾಡುವ ಉದ್ದೇಶದಿಂದ ವಂಚನೆ) ಸೇರಿದಂತೆ ವಿವಿಧ ಐಪಿಸಿ ವಿಭಾಗಗಳ ಅಡಿಯಲ್ಲಿ ಬಾಂಬ್ ಮತ್ತು ಇತರ 15 ಶಾಸಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Last Updated : Nov 19, 2020, 6:06 PM IST

ABOUT THE AUTHOR

...view details