ಮುಂಬೈ (ಮಹಾರಾಷ್ಟ್ರ):ಜನವರಿ 15ರಂದು ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ 1000ಕ್ಕೂ ಹೆಚ್ಚು ಪಕ್ಷಿಗಳು ಮೃತಪಟ್ಟಿರುವುದು ತಿಳಿದುಬಂದಿದೆ. ಮೃತಪಟ್ಟಿರುವ ಪಕ್ಷಿಗಳ ಮಾದರಿಯನ್ನು ಪರೀಕ್ಷೆಗೆಂದು ಲ್ಯಾಬ್ಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ.
'ಮಹಾ' ಹಕ್ಕಿಜ್ವರ ಭೀತಿ: ಮೃತಪಟ್ಟ 1,000 ಪಕ್ಷಿಗಳ ಮಾದರಿ ಲ್ಯಾಬ್ಗೆ ರವಾನೆ - ಮಹಾರಾಷ್ಟ್ರ ಸುದ್ದಿ
ಮಹಾರಾಷ್ಟ್ರದಲ್ಲಿ ಜನವರಿ 15ರಂದು 1000ಕ್ಕೂ ಹೆಚ್ಚು ಪಕ್ಷಿಗಳು ಮೃತಪಟ್ಟಿವೆ. ಸಾವನ್ನಪ್ಪಿದ ಪಕ್ಷಿಗಳ ಮಾದರಿಯನ್ನು ಪರೀಕ್ಷೆಗೆಂದು ಕಳುಹಿಸಲಾಗಿದೆ.

ಮಹಾರಾಷ್ಟ್ರ
9 ಜಿಲ್ಲೆಗಳಾದ ಪುಣೆ, ಅಹ್ಮದ್‌ನಗರ, ಪರಭಾನಿ, ಲಾತೂರ್, ಉಸ್ಮಾನಾಬಾದ್, ಬೀಡ್, ನಾಂದೇಡ್, ಸೋಲಾಪುರ ಮತ್ತು ರಾಯಗಡ್ದಲ್ಲಿ ಈವರೆಗೆ ಪಕ್ಷಿಜ್ವರ ಪ್ರಕರಣಗಳು ವರದಿಯಾಗಿವೆ.
"982 ಕೋಳಿಗಳು ಮತ್ತು ಇತರ 67 ಪ್ರಭೇದಗಳ ಪಕ್ಷಿಗಳು ಸಾವನ್ನಪ್ಪಿವೆ. ಏವಿಯನ್ ಇನ್ಫ್ಲುಯೆನ್ಸ್ ವೈರಸ್ ಅನ್ನು ಪರೀಕ್ಷಿಸಲು ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇಲ್ಲಿಯವರೆಗೆ 22 ಜಿಲ್ಲೆಗಳಲ್ಲಿ ಪಕ್ಷಿಗಳು ಸಾವನ್ನಪ್ಪಿರುವುದು ವರದಿಯಾಗಿದೆ" ಎಂದು ಹೇಳಿದರು.